ಬೆಂಗಳೂರು, ಮೇ 22 (DaijiworldNews/MS): ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟ 24 ಕೊರೊನಾ ಸೋಂಕಿತರ ಕುಟುಂಬಗಳಿಗೆ ರಾಜ್ಯ ಸರ್ಕಾರ ಪರಿಹಾರ ಬಿಡುಗಡೆ ಮಾಡಿದೆ.
ಕಳೆದ ತಿಂಗಳು ಆಕ್ಸಿಜನ್ ಕೊರತೆಯಿಂದ 24 ಸೋಂಕಿತರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ತುರ್ತಾಗಿ 2 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಬೇಕು. ನಂತರ ಪರಿಹಾರ ಮೊತ್ತದ ವಿಚಾರಣೆ ಮಾಡುವುದಾಗಿ ಸೂಚಿಸಿತ್ತು.
ಹೈಕೋರ್ಟ್ ಸೂಚನೆ ಮೇರೆಗೆ ರಾಜ್ಯ ಸರಕಾರ ಶನಿವಾರ ಮೃತ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದು, ಹಣ ಬಿಡುಗಡೆಗೆ ಆದೇಶಿಸಿದೆ.
ನ್ಯಾಯಾಲಯದಲ್ಲಿ ಆಕ್ಸಿಜನ್ ಕೊರತೆಯಿಂದ ಒಟ್ಟು 37 ಜನ ಮೃತಪಟ್ಟಿದ್ದಾರೆಂದು ಅರ್ಜಿದಾರರು ವಾದಿಸಿದ್ದು, ಕೋರ್ಟ್, " ಸದ್ಯ ಸರಕಾರ ಘೋಷಿಸಿರುವ ತಲಾ 2 ಲಕ್ಷ ರೂ. ಪರಿಹಾರದ ಮೊತ್ತವನ್ನು ತಕ್ಷಣವೇ ಮೃತರ ಕುಟುಂಬಗಳಿಗೆ ವಿತರಿಸಲಿ. ಉಳಿದ ವಿಚಾರವನ್ನು ಮುಂದೆ ವಿಚಾರಣೆ ನಡೆಸಿ ನಿರ್ಧರಿಸಲಾಗುವುದು,'' ಎಂದು ಹೇಳಿ ವಿಚಾರಣೆಯನ್ನು ಮೇ 25ಕ್ಕೆ ಮುಂದೂಡಿತ್ತು.