ಹೈದರಾಬಾದ್, ಮೇ.22 (DaijiworldNews/HR): ಕೊರೊನಾ ಸೋಂಕಿಗೆ ವೈದ್ಯರೊಬ್ಬರು ಆಯುರ್ವೇದ ಔಷಧವೊಂದನ್ನು ಕಂಡುಹಿಡಿದಿದ್ದು, ಔಷಧಕ್ಕಾಗಿ ಜನರು ವೈದ್ಯನ ಮನೆ ಮುಂದೆ ಮುಗಿಬಿದ್ದ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ.
ಆಯುರ್ವೇದ ವೈದ್ಯ ಆನಂದಯ್ಯ ಎಂಬುವವರು ಕೊರೊನಾ ಸೋಂಕಿಗೆ ಔಷಧವನ್ನು ಕಂಡು ಹಿಡಿದಿದ್ದು, ಸೋಂಕಿತರ ಚಿಕಿತ್ಸೆಗಾಗಿ ಈ ಔಷಧ ನೀಡುತ್ತಿದ್ದಾರೆ.
ಇನ್ನು ಔಷಧಿಗಾಗಿ ಜನರು ಆಗಮಿಸುತ್ತಿದ್ದು, ಸ್ಥಳದಲ್ಲಿ 10 ಸಾವಿರಕ್ಕೂ ಅಧಿಕ ಜನರು ಕಿಲೋಮೀಟರ್ ಗಟ್ಟಲೇ ಉದ್ದ ಸರತಿ ಸಾಲಿನಲ್ಲಿ ನಿಂತಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆನಂದಯ್ಯ ಆಯುರ್ವೆದಿಕ್ ಮೆಡಿಸಿನ್ ಬಗ್ಗೆ ಅಧ್ಯಯನ ನಡೆಸಲು ಈ ಔಷಧವನ್ನು ಐಸಿಎಂಆರ್ ಕಳುಹಿಸಲು ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ದಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.