ಮುಂಬೈ, ಮೇ.22 (DaijiworldNews/PY): ತೌಕ್ತೆ ಚಂಡಮಾರುತದ ಹೊಡೆತಕ್ಕೆ ಸಲುಕಿ ಅರಬ್ಬಿ ಸಮುದ್ರದಲ್ಲಿ ಮುಳುಗಿರುವ ಪಿ305 ಬಾರ್ಜ್ನಲ್ಲಿದ್ದವರಲ್ಲಿ 15 ಮಂದಿ ಹಾಗೂ ವರಪ್ರದ ಬೋಟ್ನಲ್ಲಿದ್ದವರಲ್ಲಿ 11 ಮಂದಿಗಾಗಿ ಶೋಧ ಕಾರ್ಯಾಚರಣೆ ಶನಿವಾರವೂ ಮುಂದುವರೆದಿದೆ.
"ಪಿ305 ಹಾಗೂ ವರಪ್ರದ ಬೋಟ್ನಲ್ಲಿರುವವರ ಪೈಕಿ 25 ಮಂದಿಯ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಮುಳುಗು ತಜ್ಞರನ್ನು ಒಳಗೊಂಡ ಐಎನ್ಎಸ್ ಮಕರ್ ಹಾಗೂ ಐಎನ್ಎಸ್ ತರಸ್ ಹಡಗುಗಳು ಶನಿವಾರ ಬೆಳಗ್ಗೆ ಮುಂಬೈಗೆ ತೆರಳಿವೆ. ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ" ಎಂದು ನೌಕಾಪಡೆಯ ವಕ್ತಾರರೋರ್ವರು ಟ್ವೀಟ್ ಮಾಡಿದ್ದಾರೆ.
ಶುಕ್ರವಾರ 11 ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ನೌಕಾಪಡೆಯು, ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದು, ಕಾರ್ಯಾಚರಣೆಗೆ ಮುಳುಗು ತಜ್ಞರನ್ನು ನಿಯೋಜನೆ ಮಾಡಿದೆ.