ಉನ್ನಾವೋ, ಮೇ 22 (DaijiworldNews/MS): 'ಕೊರೊನಾ ಕರ್ಫ್ಯೂ' ಅನ್ನು ಉಲ್ಲಂಘಿಸಿದ್ದ ಆರೋಪದಡಿಯಲ್ಲಿ ಪೊಲೀಸರು ಥಳಿಸಿದ ಪರಿಣಾಮ ೧೭ ವರ್ಷದ ಬಾಲಕ ಶುಕ್ರವಾರ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.
ಈ ಬಗ್ಗೆ ಕುಟುಂಬಸ್ಥರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದ್ದು, ಆರೋಪದ ಹಿನ್ನೆಲೆಯಲ್ಲಿ ಓರ್ವ ಪೊಲೀಸ್ ಪೇದೆಯನ್ನು ಅಮಾನತು ಮಾಡಲಾಗಿದೆ ಹಾಗೂ ಇನ್ನೊಬ್ಬ ಹೋಂಗಾರ್ಡ್ ಜವಾನನನ್ನು ವಜಾ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಗಾರಮಾವು ಪಟ್ಟಣದ ಭತ್ಪುರಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಈ ಬಾಲಕ ತನ್ನ ಮನೆ ಮುಂದೆ ತರಕಾರಿ ಮಾರುತ್ತಿದ್ದಾಗ ಪೊಲೀಸರು ಥಳಿಸಿದರು ಎನ್ನಲಾಗಿದೆ.
ಬಾಲಕನನ್ನು ಸಾಯುವಂತೆ ಹೊಡೆದ ಆರೋಪ ಎದುರಿಸುತ್ತಿರುವ ಪೊಲೀಸ್ ಪೇದೆಯ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.ಕೊರೊನಾ ಕರ್ಫ್ಯೂ' ಉಲ್ಲಂಘಿಸಿದ್ದಕ್ಕಾಗಿ ಹುಡುಗನನ್ನು ಕಾನ್ ಸ್ಟೆಬಲ್ ಬಾಲಕನನ್ನು ಹಿಡಿದು ದೊಣ್ಣೆಯಿಂದ ಥಳಿಸಿದ್ದ ಮಾತ್ರವಲ್ಲದೆ ಠಾಣೆಗೆ ಎ ಳೆದೊಯ್ದಿದ್ದು ಮತ್ತಷ್ಟು ಥಳಿಸಿದ್ದಾರೆ.
ಹಲ್ಲೆಯಿಂದ ಗಂಭೀರವಾಗಿದ್ದ ಬಾಲಕನನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವ ಸಂದರ್ಭ ಮೃತಪಟ್ಟಿದ್ದಾನೆ. ವಿಜಯ್ ಚೌಧರಿ ಎಂಬ ಪೊಲೀಸ್ ಕಾನ್ಸ್ ಸ್ಟೆಬಲ್ ಹಾಗೂ ಸತ್ಯಪ್ರಕಾಶ್ ಎಂಬ ಗೃಹರಕ್ಷಕ ದಳ ಸಿಬ್ಬಂದಿಯೊಬ್ಬರನ್ನು ವಜಾ ಮಾಡಲಾಗಿದೆ.ಪೊಲೀಸ್ ದೌರ್ಜನ್ಯದ ವಿರುದ್ಧಆಕ್ರೋಶಗೊಂಡ ಸ್ಥಳೀಯರು ಲಕ್ನೋ ರಸ್ತೆ ಕ್ರಾಸ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.