ನವದೆಹಲಿ, ಮೇ 21(DaijiworldNews/MS):ಉತ್ತರ ಪ್ರದೇಶದ ತಮ್ಮ ಸಂಸದೀಯ ಕ್ಷೇತ್ರವಾದ ವಾರಣಾಸಿಯಲ್ಲಿ ಕೊವಿಡ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿರುವ ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಂವಾದ ನಡೆಸಿದರು.
ಈ ವೇಳೆ ಕೋವಿಡ್ಗೆ ಪ್ರಾಣ ಕಳೆದುಕೊಂಡವರ ಬಗ್ಗೆ ಮಾತನಾಡುತ್ತಿದ್ದಂತೆ ಪ್ರಧಾನಿ ಮೋದಿ ಭಾವುಕರಾದರು. ಈ ವೈರಸ್ ನಮ್ಮಿಂದ ಅನೇಕ ಪ್ರೀತಿಪಾತ್ರರನ್ನು ಕಸಿದುಕೊಂಡಿದೆ. ನಾನು ಅವರಿಗೆ ನನ್ನ ವಿನಮ್ರ ಗೌರವವನ್ನು ಸಲ್ಲಿಸುತ್ತೇನೆ ಮತ್ತು ಜನರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ" ಎಂದು ಭಾವುಕರಾಗಿ ನುಡಿದು ನಿಟ್ಟುಸಿರು ಬಿಟ್ಟರು.
ವೈದ್ಯರು ಮತ್ತು ಮುಂಚೂಣಿ ಕೆಲಸಗಾರರಿಗೆ ಧನ್ಯವಾದ ಅರ್ಪಿಸಿದ ಅವರು "ಕರೋನದ ಎರಡನೇ ಅಲೆಯದಲ್ಲಿ, ನಾವು ಒಂದೇ ಸಮಯದಲ್ಲಿ ಅನೇಕ ರಂಗಗಳಲ್ಲಿ ಹೋರಾಡುತ್ತಿದ್ದೇವೆ" ಎಂದು ಹೇಳಿದರು.
ಇದೇ ವೇಳೆ ಪ್ರಧಾನಿ ಮೋದಿ ಅವರು ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ಮನೆ ಬಾಗಿಲಲ್ಲಿ ಚಿಕಿತ್ಸೆ ( 'ಜಹಾ ಬಿಮಾರ್, ವಹೀ ಉಪ್ಚಾರ್' ) ಎಂಬ ಹೊಸ ಘೋಷಣೆಯನ್ನು ಮಾಡಿದ ಮೋದಿ ವಾರಣಾಸಿ ಜಾರಿಗೆ ತಂದ ಮೈಕ್ರೊ ಕಂಟೇನ್ ಮೆಂಟ್ ಜೋನ್ ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪಿಎಂ ಮೋದಿ ವಾರಣಾಸಿ ಕ್ಷೇತ್ರದ ಸಂಸತ್ ಸದಸ್ಯರಾಗಿದ್ದಾರೆ. ಕೊವಿಡ್ -19 ರ ಎರಡನೇ ತರಂಗದಲ್ಲಿ, ಇದು ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ ಅತೀ ಹೆಚ್ಚು ಕೊವಿಡ್ ಪ್ರಕರಣಗಳಿವೆ.