ಜೈಪುರ, ಮೇ.20 (DaijiworldNews/PY): "ಪ್ರಸ್ತುತ ದೇಶದಲ್ಲಿ ಕೊರೊನಾ ಲಸಿಕೆಯ ಕೊರತೆ ಕಾಣಿಸುತ್ತಿದ್ದು, ಈ ನಡುವೆ ಈ ವರ್ಷದ ಡಿಸೆಂಬರ್ ವೇಳೆಗೆ ದೇಶದ ಎಲ್ಲಾ ಜನರಿಗೂ ಲಸಿಕೆ ದೊರೆಯಲಿದೆ" ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ರಾಜಸ್ಥಾನದ ಕೊರೊನ ಪರಿಸ್ಥಿತಿ ಪರಿಶೀಲಿಸಲು ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಹಾಗೂ ಪಕ್ಷದ ಸಂಸದರ ಜೊತೆ ವರ್ಚುವಲ್ ಸಭೆ ನಡೆಸಿ ನಂತರ ಮಾತನಾಡಿದರು.
"ಕೇವಲ 9 ತಿಂಗಳಲ್ಲಿ ದೇಶವು ಮೊದಲ ಬಾರಿಗೆ ಎರಡು ದೇಶೀಯ ಲಸಿಕೆಗಳನ್ನು ಅಭಿವೃದ್ದಿಪಡಿಸಿದೆ. ಈವರೆಗೆ ಸುಮಾರು 18 ಕೋಟಿ ಭಾರತೀಯರಿಗೆ ಲಸಿಕೆ ನೀಡಲಾಗಿದೆ. ಪ್ರಸ್ತುತ ದೇಶದಲ್ಲಿ ಕೊರೊನಾ ಲಸಿಕೆಯ ಕೊರತೆ ಕಾಣಿಸುತ್ತಿದ್ದು, ಈ ವರ್ಷದ ಡಿಸೆಂಬರ್ ವೇಳೆಗೆ ದೇಶದ ಎಲ್ಲಾ ಜನರಿಗೂ ಲಸಿಕೆ ಲಭ್ಯವಾಗಲಿದೆ" ಎಂದಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಆಕ್ಸಿಜನ್ ಹಾಗೂ ಔಷಧಿಗಳ ಲಭ್ಯತೆ, ಪೂರೈಕೆಯ ಬಗ್ಗೆ ಖಚಿತಪಡಿಸಿದೆ" ಎಂದು ಹೇಳಿದ್ದಾರೆ.