ಜೈಪುರ, ಮೇ 20 (DaijiworldNews/MS): ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಪಹಾಡಿಯಾ (89) ಕೋವಿಡ್ ಸೋಂಕಿಗೆ ಮೇ 19ರ ಬುಧವಾರ ಬಲಿಯಾಗಿದ್ದಾರೆ. ಕೊವೀಡ್ ದೃಢಪಟ್ಟ ಹಿನ್ನಲೆಯಲ್ಲಿ ಪಹಾಡಿಯಾ ಅವರನ್ನು ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಾಜಿ ಸಿಎಂ ಜಗನ್ನಾಥ್ ಪಹಾಡಿಯಾ ಅವರ ನಿಧನಕ್ಕೆ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಸಂತಾಪ ಸೂಚಿಸಿದ್ದಾರೆ. ಕೇಂದ್ರ ಸಚಿವರಾಗಿ, ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದ ಜಗನ್ನಾಥ್ ಪಹಾಡಿಯಾ ಅವರ ನಿಧನದ ಸುದ್ದಿ ಕೇಳಿ ನನಗೆ ಆಘಾತವಾಯಿತು ಎಂದು ಸಿಎಂ ಅಶೋಕ್ ಗೆಹ್ಲೊಟ್ ಟ್ವೀಟ್ ಮಾಡಿದ್ದಾರೆ.
1980-81ರಲ್ಲಿ ರಾಜಸ್ತಾನದ ಮುಖ್ಯಮಂತ್ರಿಯಾಗಿದ್ದ ಪಹಾಡಿಯಾ ನಂತರದ ದಿನಗಳಲ್ಲಿ ಹರ್ಯಾಣ ಮತ್ತು ಬಿಹಾರದ ಗವರ್ನರ್ ಕೂಡ ಆಗಿದ್ದರು. ಇವರ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಪಹಾಡಿಯಾ ಅವರ ನಿಧನದ ಹಿನ್ನಲೆಯಲ್ಲಿ ರಾಜಸ್ತಾನ ಸರ್ಕಾರ ಒಂದು ದಿನ ಶ್ರದ್ಧಾಂಜಲಿ ಘೋಷಿಸಿದೆ. ರಾಷ್ಟ್ರಧ್ವಜ ಅರ್ಧಕ್ಕೆ ಇಳಿಸಲಾಗುತ್ತದೆ. ಸರ್ಕಾರಿ ಕಚೇರಿಗೆ ರಜೆ ಘೋಷಿಸಲಾಗಿದೆ.