ಚಿಕ್ಕಮಗಳೂರು, ಮೇ.19 (DaijiworldNews/HR): ಮೂಡಿಗೆರೆ, ಆಲ್ದೂರಿನ ಮಲೆನಾಡಿನ ಭಾಗದಲ್ಲಿನ ಕೆಲ ಚರ್ಚ್ಗಳಲ್ಲಿ ವ್ಯಾಕ್ಸಿನ್ ತಗೋಬೇಡಿ ಅಂತ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಚಿಕ್ಕಮಗಳೂರಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮತಾಂತರಗೊಂಡವರು ಚರ್ಚಿಗೆ ಹೋದಾಗ ಈ ರೀತಿಯಾಗಿ ಅಪಪ್ರಚಾರ ಮಾಡಲಾಗುತ್ತಿದ್ದು, ಯಾರು, ಏಕೆ ಹೀಗೆ ಹೇಳ್ತಿದ್ದಾರೆ ಎಂಬುದನ್ನ ಆದಷ್ಟು ಬೇಗ ಪತ್ತೆ ಮಾಡಬೇಕು. ಅವರು ವ್ಯಾಕ್ಸಿನ್ ತೆಗೆದುಕೊಳ್ತಾರೆ ಬೇರೆಯವರಿಗೆ ಬೇಡ ಎನ್ನುತ್ತಾರೆ" ಎಂದು ದೂರಿದ್ದಾರೆ.
"ಕ್ಯಾಥೋಲಿಕ್ ಚರ್ಚ್ ಹೇಳಿದ್ದು ಅಂತಲ್ಲ, ಅದರಲ್ಲೇ ಬೇರೆ ಚರ್ಚ್ ಇರಬಹುದು. ಪ್ರಾಟೆಸ್ಟೆಂಟ್, ಸೆಂಥಕೋಸ್ಟ್ ಈ ರೀತಿ ಇತ್ತೀಚೆಗೆ ಬಂದ ಚರ್ಚ್ಗಳಿಂದ ಅಪಪ್ರಚಾರ ನಡೆಯುತ್ತಿದ್ದು, ಅವರ ಬಗ್ಗೆ ತನಿಕೆ ಮಾಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇನ್ನು ಇಡೀ ಜಗತ್ತು ಕೊರೊನಾವು ಚೀನಾ ವೈರಸ್ ಎಂದು ಹೇಳುತ್ತಿದೆ, ಆದರೆ ಕಾಂಗ್ರೆಸ್ ಇಂಡಿಯಾ ವೈರಸ್, ಮೋದಿ ವೈರಸ್ ಎಂದು ಹೇಳಿ ದೇಶಕ್ಕೆ ಅಮಾನಿಸ್ತಿದ್ದಾರೆ" ಎಂದರು.
"ವಿಶ್ವದೆದರು ದೇಶವನ್ನು ಕುಗ್ಗಿಸಿ ಅಪರಾಧಿ ಜಾಗದಲ್ಲಿ ನಿಲ್ಲಿಸುವ ಷಡ್ಯಂತ್ರವನ್ನು ಕಾಂಗ್ರೆಸ್ ಮಾಡುತ್ತಿದ್ದು, ಇದು ಕಾಂಗ್ರೆಸ್ನ ವೋಟ್ ಬ್ಯಾಂಕ್ ರಾಜಕಾರಣ, ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಮಾಡೋಣ ಈಗ ದೇಶದಲ್ಲಿ ಯುದ್ಧದ ಸಂದರ್ಭಲ್ಲಿ ಇಂತಹಾ ಸಂದರ್ಭದಲ್ಲಿ ರಾಜಕಾರಣ ಸರಿಯಲ್ಲ. ಚೀನಾವೇ ನಮ್ಮ ವೈರಿ ದೇಶ, ಕಾಂಗ್ರೆಸ್ನವರು ಚೀನಾವನ್ನೇ ಮೀರಿಸುವ ರೀತಿ ಮಾತನಾಡ್ತಿದ್ದಾರೆ. ದೇಶ, ವ್ಯಾಕ್ಸಿನ್, ಮೋದಿ ವೈರಸ್, ಇಂಡಿಯಾ ವೈರಸ್ ಎಂದು ಹೇಳುವವರ ವಿರುದ್ಧ ಕೇಸ ದಾಖಲಿಸಬೇಕು" ಎಂದು ಹೇಳಿದ್ದಾರೆ.