ನವದೆಹಲಿ,ಮೇ 19 (DaijiworldNews/MS): ಕೇಂದ್ರ ಆರೋಗ್ಯ ಸಚಿವಾಲಯವು ಹೊಸ ವ್ಯಾಕ್ಸಿನೇಷನ್ ಮಾನದಂಡಗಳನ್ನು ಬಿಡುಗಡೆ ಮಾಡಿದ್ದು ಈ ಪ್ರಕಾರ ಹಾಲುಣಿಸುವ ತಾಯಂದಿರು ಹಾಗೂ ಕೊರೊನಾದಿಂದ ಗುಣಮುಖರಾದವರು ಮೂರು ತಿಂಗಳ ಬಳಿಕ ಲಸಿಕೆ ಪಡೆದುಕೊಳ್ಳಬಹುದಾಗಿದೆ.
ಕೊವೀಡ್ ವ್ಯಾಕ್ಸಿನೇಷನ್ಗೆ ಸಂಬಂಧಿಸಿದಂತೆ ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಸಮಿತಿ (ಎನ್ಇಜಿವಿಎಸಿ) ಹೊಸ ಶಿಫಾರಸ್ಸುಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಸ್ವೀಕರಿಸಿದ್ದು, ಕೋವಿಡ್ಗೆ ತುತ್ತಾಗಿದ್ದು ಖಚಿತವಾಗಿರುವ ರೋಗಿಗಳು ತಾವು ಚೇತರಿಸಿಕೊಂಡ 3 ತಿಂಗಳ ಬಳಿಕ ಪಡೆದುಕೊಳ್ಳಬಹುದಾಗಿದೆ.
ಇನ್ನು ಕೊವೀಡ್ ಲಸಿಕೆಯ 1 ನೇ ಡೋಸ್ ನಂತರ ಕರೋನವೈರಸ್ ಸೋಂಕಿಗೆ ಒಳಗಾಗಿದ್ದರೆ, 2 ನೇ ಡೋಸ್ ಅನ್ನು ಚೇತರಿಕೆಯ ನಂತರ 3 ತಿಂಗಳ ಬಳಿಕ ಪಡೆದುಕೊಳ್ಳಬಹುದಾಗಿದೆ. ಹಾಗೂ ಪ್ಲಾಸ್ಮಾ ಥೆರಪಿಯಿಂದ ಚಿಕಿತ್ಸೆ ಪಡೆದ ರೋಗಿಗಳು ತಮ್ಮ ಲಸಿಕೆಯನ್ನು ಮೂರು ತಿಂಗಳು ಮುಂದೂಡಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಹಾಲುಣಿಸುವ ಎಲ್ಲಾ ಮಹಿಳೆಯರಿಗೆ ಕೊವೀಡ್ ಲಸಿಕೆಯನ್ನುಆರೋಗ್ಯ ಸಚಿವಾಲಯ ಶಿಫಾರಸು ಮಾಡಿದೆ.