ಬೆಂಗಳೂರು, ಮೇ.19 (DaijiworldNews/HR): ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಬಳಸುತ್ತಿರುವ ಲಸಿಕೆಯು ರಾಜ್ಯದ ಪ್ರತಿಯೊಬ್ಬರಿಗೂ ನವೆಂಬರ್ ಒಳಗೆ ದೊರೆಯಲಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, "ಲಸಿಕೆಯನ್ನು ಭಾರತ್ ಬಯೋಟೆಕ್ ಪೂರೈಸಲಿದ್ದು, ಮುಂದೆ ಕರ್ನಾಟಕದಲ್ಲೇ ಲಸಿಕೆ ಉತ್ಪಾದನೆಯಾಗಲಿದ್ದು, ರಷ್ಯಾದ ಸ್ಪುಟ್ನಿಕ್ ಕೂಡ ರಾಜ್ಯದಲ್ಲಿಯೇ ಉತ್ಪಾದನೆಯಾಗಲಿದೆ" ಎಂದರು.
"ಕೋವ್ಯಾಕ್ಸಿನ್ ನಮ್ಮ ರಾಜ್ಯದಲ್ಲೇ ಉತ್ಪಾದನೆಯಾಗಲಿದ್ದು, ಭಾರತ್ ಬಯೋಟೆಕ್ ಇದನ್ನ ಉತ್ಪಾದನೆ ಮಾಡಲಿದ್ದು ಅವರೊಂದಿಗೆ ಮಾತುಕತೆ ನಡೆಸಿದ್ದು ತುರ್ತು ಅಗತ್ಯವಿರುವ ಲಸಿಕೆ ನೀಡುವ ಭರವಸೆಯನ್ನು ಕೊಟ್ಟಿದ್ದು, ಮುಂದಿನ ವಾರ ಹೆಚ್ಚು ವಯಲ್ಸ್ ಸಿಗಲಿದೆ. ತುರ್ತಾಗಿ 500 ವಯಲ್ಸ್ ನೀಡುವಂತೆ ನಾವು ಕೇಳಿದ್ದೇವೆ. ಅದು ದೊರೆತರೆ ಲಸಿಕೆ ಸಮಸ್ಯೆ ಅರ್ಧ ಬಗೆಹರಿಯಲಿದೆ" ಎಂದಿದ್ದಾರೆ.
ಇನ್ನು "ನವೆಂಬರ್ ಒಳಗೆ ಎಲ್ಲರಿಗೆ ಲಸಿಕೆ ಲಭ್ಯವಾಗಲಿದ್ದು, ನವೆಂಬರ್ ತಿಂಗಳಿನ ಒಳಗೆ ನಮ್ಮ ರಾಜ್ಯದ ಎಲ್ಲರಿಗೆ ಲಸಿಕೆ ದೊರೆಯುವ ವಿಶ್ವಾಸ ನಮಗಿದೆ" ಎಂದು ಹೇಳಿದ್ದಾರೆ.