ಹಾಸನ, ಮೇ.19 (DaijiworldNews/PY): ರೈಲಿಗೆ ಸಿಲುಕಿ ಒಂಟಿ ಸಲಗ ಸಾವನ್ನಪ್ಪಿದ್ದ ಘಟನೆ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ ಬಳಿ ನಡೆದಿದೆ.
ಬೆಂಗಳೂರಿನಿಂದ ಕಾರವಾರಕ್ಕೆ ತೆರಳುತ್ತಿದ್ದ ರೈಲು ರಾತ್ರಿ 12 ಗಂಟೆಯ ಸುಮಾರಿಗೆ ಹಸಡೆ ಪಾಸ್ ದಾಟುವ ವೇಳೆ ಅಡ್ಡ ಬಂದ ಆನೆಗೆ ರೈಲು ಢಿಕ್ಕಿ ಹೊಡೆದಿದೆ. ಪರಿಣಾಮ ಆನೆ ಸಾವನ್ನಪ್ಪಿದ್ದು, ಕಾರವಾರಕ್ಕೆ ತೆರಳುತ್ತಿದ್ದ ರೈಲು ಸ್ಥಳದಲ್ಲೇ ನಿಂತಿದೆ.
ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಭೇಡಿ ನೀಡಿ ಕ್ರೇನ್ ಮೂಲಕ ಆನೆ ಮೃತದೇಹವನ್ನು ತೆರವುಗೊಳಿಸಿ, ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ.
ಗುಂಪಿನಿಂದ ಬೇರ್ಪಟ್ಟಿದ್ದ ಒಂಟಿ ಸಲಗ ಕೆಲವು ದಿನಗಳಿಂದ ರೈಲ್ವೆ ಹಳಿ ಮೇಲೆ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣಿಸಿಕೊಂಡಿತ್ತು. ಇದೀಗ ಆನೆ ರೈಲಿಗೆ ಸಿಲುಕಿ ಸಾವನ್ನಪ್ಪಿದೆ.