ಮುಂಬೈ, ಮೇ.19 (DaijiworldNews/PY): "ತೌಕ್ತೆ ಚಂಡಮಾರುತದ ಹೊಡೆತದ ಪರಿಣಾಮ ಅರಬ್ಬಿ ಸಮುದ್ರದಲ್ಲಿ ಸಿಲುಕಿರುವ ಪಿ305 ಬಾರ್ಜ್ನಲ್ಲಿದ್ದವರಲ್ಲಿ 89 ಮಂದಿ ನಾಪತ್ತೆಯಾಗಿದ್ದಾರೆ. ಶೋಧ ಕಾರ್ಯಾಚರಣೆ ಮುಂದುವರೆದಿದೆ" ಎಂದು ಬುಧವಾರ ನೌಕಾಪಡೆ ತಿಳಿಸಿದೆ.
"ಪಿ305 ಬಾರ್ಜ್ನಲ್ಲಿ 273 ಸಿಬ್ಬಂದಿಗಳಿದ್ದರು, ಆ ಪೈಕಿ 184 ಮಂದಿಯನ್ನು ರಕ್ಷಿಸಲಾಗಿದೆ. ಅಲ್ಲದೇ, ಇನ್ನು ಎರಡು ಬಾರ್ಜ್ಗಳು ಹಾಗೂ ತೈಲ ಘಟಕದ ಸಿಬ್ಬಂದಿ ಸಹ ಸುರಕ್ಷಿತವಾಗಿದ್ಧಾರೆ" ಎಂದು ಹೇಳಿದೆ.
"ಐಎನ್ಎಸ್ ಬಿಯಾಸ್ ಹಡಗುಗಳು ಸೇರಿದಂತೆ ಐಎನ್ಎಸ್ ತೇಗ್, ನೌಕಾಪಡೆಯ ಹೆಲಿಕಾಪ್ಟರ್ಗಳು, ಐಎನ್ಎಸ್ ಬೆಟ್ವಾ ಹಾಗೂ ಪಿ8ಐ ವಿಮಾನ ಶೋಧ ಕಾರ್ಯಾಚರಣೆ ನಡೆಸುತ್ತಿವೆ" ಎಂದು ನೌಕಾಪಡೆಯ ವಕ್ತಾರೊಬ್ಬರು ಮಾಹಿತಿ ನೀಡಿದ್ದಾರೆ.
"ಈ ಕಾರ್ಯದಲ್ಲಿ ಐಎನ್ಎಸ್ ತಲ್ವಾರ್ ಕೂಡಾ ತೊಡಗಿದೆ. ಬಾರ್ಜ್ಗಳನ್ನು ಸುರಕ್ಷಿತವಾಗಿ ತೀರಕ್ಕೆ ತರುವ ಕಾರ್ಯದಲ್ಲಿ ಒಎನ್ಜಿಸಿ ಹಾಗೂ ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದ ಹಡಗುಗಳು ನೆರವಾಗುತ್ತಿದೆ" ಎಂದಿದ್ದಾರೆ.
ನೌಕಾಪಡೆಯ ವೈಸ್ಅಡ್ಮಿರಲ್ ಮುರಳೀಧರ್ ಎಸ್.ಪವಾರ್ ಪ್ರತಿಕ್ರಿಯೆ ನೀಡಿದ್ದು, "ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ವಿವಿಧ ರಕ್ಷಣಾ ಕಾರ್ಯಗಳ ಪೈಕಿ ಈಗ ನಡೆಯುತ್ತಿರುವ ರಕ್ಷಣಾ ಕಾರ್ಯ ಸವಾಲಿನದ್ದಾಗಿದೆ" ಎಂದಿದ್ದಾರೆ.