ನವದೆಹಲಿ, ಮೇ.18 (DaijiworldNews/HR): ಮೇ ತಿಂಗಳಲ್ಲಿ 10 ಕೆಜಿ ಉಚಿತ ಪಡಿತರ (ದೆಹಲಿ ಸರ್ಕಾರದಿಂದ 5 ಕೆಜಿ ಮತ್ತು ಕೇಂದ್ರದ ಕೋಟಾದಿಂದ 5 ಕೆಜಿ) ಹಾಗೂ ಕೊರೊನಾ ವೈರಸ್ನಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣವನ್ನೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅರವಿಂದ್ ಕೇಜ್ರಿವಾಲ್, "ದೆಹಲಿಯಲ್ಲಿ 72 ಲಕ್ಷ ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ತಿಂಗಳು 5 ಕೆಜಿ ಪಡಿತರವನ್ನು ನೀಡಲಾಗುತ್ತಿದ್ದು, ಈ ತಿಂಗಳು ಪಡಿತರವನ್ನು ಉಚಿತವಾಗಿ ನೀಡಲಾಗುವುದು. ಹೆಚ್ಚುವರಿ 5 ಕೆಜಿ ಉಚಿತ ಪಡಿತರವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಆದ್ದರಿಂದ ಅವರಿಗೆ ಈ ತಿಂಗಳು 10 ಕೆಜಿ ಉಚಿತ ಪಡಿತರವನ್ನು ನೀಡಲಾಗುತ್ತಿದೆ" ಎಂದರು.
ಇನ್ನು "ಪಡಿತರ ಚೀಟಿ ಇಲ್ಲದಿದ್ದರೂ ಬಡವರಾಗಿರುವವರಿಗೆ ದೆಹಲಿ ಸರ್ಕಾರವು ಪಡಿತರ ನೀಡಲಿದ್ದು,ಅವರು ತಮ್ಮ ಆದಾಯ ಪ್ರಮಾಣಪತ್ರವನ್ನು ಉತ್ಪಾದಿಸುವ ಅಗತ್ಯವಿಲ್ಲ, ನಾವು ಬಡವರು ಪಡಿತರದ ಅಗತ್ಯವಿದೆ ಎಂದರೆ ಸಾಕು" ಎಂದಿದ್ದಾರೆ.
ಕೊರೊನಾಗೆ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳಿಗೆ 50,000 ರೂ.ಗಳ ಎಕ್ಸ್-ಗ್ರೇಟಿಯಾ ಮೊತ್ತವನ್ನು ನೀಡಲಾಗುವುದು. ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡ ಮಕ್ಕಳಿಗೆ 2,500 ರೂ. ಅವರು ಉಚಿತ ಶಿಕ್ಷಣವನ್ನೂ ಪಡೆಯುತ್ತಾರೆ" ಎಂದು ಹೇಳಿದ್ದಾರೆ.