ನವದೆಹಲಿ, ಮೇ.18 (DaijiworldNews/PY): "ಕೊರೊನಾ ವೈರಸ್ನಿಂದ ಮಕ್ಕಳನ್ನು ರಕ್ಷಿಸುವುದು ಅಗತ್ಯವಿರುವ ಕಾರಣ ದೇಶದ ಭವಿಷ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಪ್ರಸ್ತುತ ವ್ಯವಸ್ಥೆಯನ್ನು ನಿದ್ರೆಯಿಂದ ಎಚ್ಚರಗೊಳಿಸುವುದು ಅವಶ್ಯಕ" ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಮುಂದಿನ ದಿನಗಳಲ್ಲಿ ಕೊರೊನಾದಿಂದ ಮಕ್ಕಳಿಗೆ ರಕ್ಷಣೆ ಅಗತ್ಯ. ಮಕ್ಕಳ ಆರೋಗ್ಯ ಸೇವೆಗಳು ಹಾಗೂ ಲಸಿಕೆ ಚಿಕಿತ್ಸೆಯ ಪ್ರೋಟೋಕಾಲ್ಗಳು ಈಗಿನಿಂದ ಸಿದ್ದವಾಗಿರಬೇಕು ಎಂದಿದ್ದಾರೆ.
"ದೇಶ ಭವಿಷ್ಯಕ್ಕಾಗಿ ಪ್ರಸ್ತುತ ಮೋದಿ ವ್ಯವಸ್ಥೆಯನ್ನು ನಿದ್ರೆಯಿಂದ ಎಚ್ಚರಗೊಳಿಸುವುದು ಅವಶ್ಯಕ" ಎಂದು ಹೇಳಿದ್ದಾರೆ.
"ಎಲ್ಲಾ ಭಾರತೀಯರಿಗೆ ಕೊರೊನಾದಿಂ ರಕ್ಷಣೆ ಒದಗಿಸಲು ಸೂಕ್ತವಾದ ಲಸಿಕೆ ಪ್ರೋಟೋಕಾಲ್ ಅನ್ನು ಜಾರಿಗೆ ತರಲು ಗಾಂಧಿ ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಮುಖ್ಯಸ್ಥ ಹಾಗೂ ಅವರ ಪಕ್ಷ ಕೂಡಾ ಸರ್ಕಾರದ ಲಸಿಕಾ ನೀತಿಯನ್ನು ತಾರತಮ್ಯ" ಎಂದು ಟೀಕಿಸಿದ್ಧಾರೆ.