ನವದೆಹಲಿ, ಮೇ 18 (DaijiworldNews/MS): ಭಾರತದ ವ್ಯಾಕ್ಸಿನೇಷನ್ ಡ್ರೈವ್ ಭಾಗವಾಗಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಮತ್ತೊಂದು ಲಸಿಕೆ ಈಗಾಗಲೇ ಭಾರತಕ್ಕೆ ಬಂದಿದೆ. ರಷ್ಯಾದ ಲಸಿಕೆ ಸ್ಪುಟ್ನಿಕ್-ವಿ ಈಗ ಕೋವಿನ್ ಅಪ್ಲಿಕೇಶನ್ನಲ್ಲಿ ಬುಕಿಂಗ್ ಗೆ ಲಭ್ಯವಾಗಿದೆ.
ಡಾ. ರೆಡ್ಡಿಗಳ ಪ್ರಯೋಗಾಲಯವು ಭಾರತದಲ್ಲಿ ಉತ್ಪಾದಿಸುತ್ತಿರುವ ರಷ್ಯಾದ COVID-19 ಲಸಿಕೆಯನ್ನು ಸ್ಪುಟ್ನಿಕ್ ವಿ ಮೇ 18 ರಂದು ಕೋವಿನ್ ಪ್ಲಾಟ್ಫಾರ್ಮ್ಗೆ ಪರಿಚಯಿಸಿದೆ. ವರದಿಯ ಪ್ರಕಾರ, ಇದು ಅಪೊಲೊ ಆಸ್ಪತ್ರೆಯಲ್ಲಿ 1250 ರೂ.ಗಳ ಬೆಲೆಯಲ್ಲಿ ಲಭ್ಯವಿದೆ.
ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಸ್ಪುಟ್ನಿಕ್-ವಿ ಲಸಿಕೆಗಾಗಿ ಅಪೊಲೊ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹೈದರಾಬಾದ್ನ ಜುಬಿಲಿ ಹಿಲ್ಸ್ ನ ಅಪೊಲೊ ಆಸ್ಪತ್ರೆಯಲ್ಲಿ 45 ವರ್ಷ ಮೇಲ್ಪಟ್ಟ ಜನರಿಗೆ ಸ್ಪುಟ್ನಿಕ್ ವಿ ಲಸಿಕೆ ನೀಡಲಾಗುತ್ತಿದೆ. ಇದಲ್ಲದೆ ವಿಶಾಖಪಟ್ಟಣಂ, ದೆಹಲಿ, ಮುಂಬೈ, ಬೆಂಗಳೂರು, ಅಹಮದಾಬಾದ್, ಚೆನ್ನೈ, ಕೋಲ್ಕತಾ ಮತ್ತು ಪುಣೆಯಲ್ಲಿಯೂ ಲಸಿಕೆ ನೀಡಲಾಗ್ತಿದೆ.
ರಷ್ಯಾದಲ್ಲಿ ತಯಾರಿಸಿದ ಸ್ಪುಟ್ನಿಕ್-ವಿ ಯ ಮೊದಲ ಸರಕು ಸುಮಾರು ಒಂದುವರೆ ಮಿಲಿಯನ್ ಡೋಸ್ ಮೇ 1 ರಂದು ಭಾರತವನ್ನು ತಲುಪಿತ್ತು. ಕಳೆದ ವಾರ ಲಸಿಕೆ ದರವನ್ನು ಬಹಿರಂಗಪಡಿಸಿದ ಡಾ. ರೆಡ್ಡಿಸ್ ಲ್ಯಾಬ್ ಈ ಲಸಿಕೆಗೆ ಒಪ್ಪಿಗೆ ಸಿಕ್ಕಿದೆ ಎಂದಿತ್ತು.
ಇನ್ನು ಕೋವಿನ್ 18-44 ವರ್ಷ ವಯಸ್ಸಿನವರಿಗೆ ಲಸಿಕೆ ಹಾಕಲು ಪೋರ್ಟಲ್ನಲ್ಲಿ ನೋಂದಣಿ ಕಡ್ಡಾಯವಾಗಿದೆ. ಪೋರ್ಟಲ್ ನಲ್ಲಿ ಈಗ ವಯಸ್ಸು 18+, ವಯಸ್ಸು 45+, ಕೋವಿಶೀಲ್ಡ್, ಕೊವಾಕ್ಸಿನ್, ಸ್ಪುಟ್ನಿಕ್ ವಿ, ಉಚಿತ ಮತ್ತು ಪಾವತಿಸಿದ ಟ್ಯಾಬ್ಗಳ ಆಯ್ಕೆಯನ್ನು ನೀಡುತ್ತದೆ.