ತಿರುವನಂತಪುರಂ, ಮೇ.18 (DaijiworldNews/PY): ವಿವಿಧ ಖಾತೆಗಳಿಂದ 8 ಲಕ್ಷ ರೂ. ಎಗರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಆರೋಪಿಯನ್ನು ಪತ್ತನಂತಿಟ್ಟದ ಕೆನರಾ ಬ್ಯಾಂಕ್ ಶಾಖೆಯ ಉದ್ಯೋಗಿ ವಿಜೀಶ್ ವರ್ಗೀಸ್ ಎಂದು ಗುರುತಿಸಲಾಗಿದೆ.
ವಿಜೀಶ್ ನಿಶ್ಚಿತ ಠೇವಣಿ ಹೊಂದಿದ್ದು, ಆದರೆ, ಬಳಕೆಯಾಗದೇ ಇರುವ ಖಾತೆಗಳಿಂದ ಹಣ ತೆಗೆಯುತ್ತಿದ್ದ ಎನ್ನಲಾಗಿದೆ. ಕಳೆದ ಫೆಬ್ರವರಿಯಲ್ಲಿ ಈತ ಇನ್ನೋರ್ವ ಬ್ಯಾಂಕ್ ಉದ್ಯೋಗಿಯ ಎಫ್ಡಿ ಖಾತೆಯನ್ನು ಆಕಸ್ಮಿಕವಾಗಿ ಮುಚ್ಚಿದ ಸಂದರ್ಭ ವಂಚನೆ ಬೆಳಕಿಗೆ ಬಂದಿದೆ.
ವಿಜೀಶ್ ವರ್ಗೀಸ್ ಈ ಮೊದಲು ನೌಕಾಪಡೆಯಲ್ಲು ಸೇವೆ ಸಲ್ಲಿಸಿದ್ದರು ಎನ್ನಲಾಗಿದೆ. ಪ್ರಕರಣದ ಬಗ್ಗೆ ತಿಳಿಯುತ್ತಿದ್ದಂತೆ ವಿಜೇಶ್ ತಲೆಮರೆಸಿಕೊಂಡಿದ್ದು, ಬಳಿಕ ಪೊಲೀಸರ ತಂಡ ಆತನನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ಬಂಧಿಸಿ, ಕೇರಳಕ್ಕೆ ಕರೆತಂದಿದ್ದಾರೆ.
ಬ್ಯಾಂಕ್ ಖಾತೆಗಳಿಂದ ಕದ್ದ ಹಣವನ್ನು ಆನ್ಲೈನ್ ಗೇಮ್ ಹಾಗೂ ಷೇರು ವ್ಯವಹಾರಕ್ಕೆ ಬಳಸಿಕೊಂಡಿದ್ದಾಗಿ ಪೊಲೀಸರಿಗೆ ವಿಜೀಶ್ ಹೇಳಿದ್ದಾನೆ.