ಮುಂಬೈ, ಮೇ.18 (DaijiworldNews/PY): ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಅರಬ್ಬಿ ಸಮುದ್ರದಲ್ಲಿ ಸಿಲುಕಿದ್ದ ಎರಡು ದೋಣಿಗಳಲ್ಲಿ ಸಿಲುಕಿದ್ದ 60 ಮಂದಿಯನ್ನು ಭಾರತೀಯ ನೌಕಾಪಡೆ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
"ತೌಕ್ತೆ ಚಂಡಮಾರುತದ ಪರಿಣಾಮ 185 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಗುಜರಾತ್ ಹಲವೆಡೆ ಭೂಕುಸಿತ ಉಂಟಾಗಿದೆ" ಎಂದು ಮಂಗಳವಾರ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಮುಂಬೈನ್ ಕರಾವಳಿಯಲ್ಲಿ ಎರಡು ದೋಣಿಗಳು ದುರಂತಕ್ಕೀಡಾಗಿದ್ದು, ದೋಣಿಯಲ್ಲಿ 410 ಮಂದಿ ಸಿಬ್ಬಂದಿಗಳು ಇರುವುದಾಗಿ ನೌಕಾಪಡೆಗೆ ಸೋಮವಾರ ಸಂದೇಶ ನೀಡಲಾಗಿತ್ತು. ಈ ನಿಟ್ಟಿನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಐಎನ್ಎಸ್ ಕೊಚ್ಚಿ, ಐಎನ್ಎಸ್ ತಲ್ವಾರ್ ಹಾಗೂ ಐಎನ್ಎಸ್ ಕೋಲ್ಕತ್ತ ಮುರು ಮುಂಚೂಣಿ ಯುದ್ದನೌಕೆಗಳನ್ನು ನೌಕಾಪಡೆಯು ನಿಯೋಜನೆ ಮಾಡಿತ್ತು.
"ಸೋಮವಾರ ರಾತ್ರಿ 11 ಗಂಟೆಯವರೆಗೂ ಕಾರ್ಯಾಚರಣೆ ನಡೆಸಿ ಬಾರ್ಜ್ ಪಿ 305 ಹಡಗಿನಲ್ಲಿದ್ದ 60 ಮಂದಿ ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ. ಕಾರ್ಯಾಚರಣೆ ಮುಂದುವರೆಸಲಾಗಿದೆ" ಎಂದು ನೌಕಾಪಡೆಯ ವಕ್ತಾರರು ಹೇಳಿದ್ದಾರೆ.
"ತೀವ್ರ ಹವಾಮಾನ ವೈಪರಿತ್ಯದ ಮಧ್ಯೆಯೂ ಕಾರ್ಯಾಚರಣೆ ಮುಂದುವರೆಸಲಾಗುವುದು" ಎಂದು ತಿಳಿಸಿದ್ದಾರೆ.