ಭೋಪಾಲ್, ಮೇ 18 (DaijiworldNews/MS): ಗೋ ಮೂತ್ರ ಸೇವನೆಯೂ ಕೋವಿಡ್ -19ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ಭಾರತೀಯ ಜನತಾ ಪಕ್ಷದ ಸಂಸತ್ ಸದಸ್ಯ ಪ್ರಗ್ಯಾ ಠಾಕೂರ್ ಅವರು ಹೇಳಿದ್ದಾರೆ.
ಭಾನುವಾರ ಭೋಪಾಲ್ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದಾಗ ಈ ವಿಚಾರ ಹೇಳಿದ್ದು, " ದೇಶಿ ಹಸುವಿನ ಅರ್ಕವು ನಮ್ಮ ಶ್ವಾಸಕೋಶಕ್ಕೆ ಸೋಂಕು ತಗುಲದಂತೆ ನೋಡಿಕೊಳ್ಳುತ್ತದೆ. ನಾನು ತುಂಬಾ ಆರೋಗ್ಯ ಸಮಸ್ಯೆಯಲ್ಲಿದ್ದೇನೆ. ಆದರೆ ನಾನು ಪ್ರತಿದಿನ ದೇಶಿ ಹಸುವಿನ ಅರ್ಕ ಸೇವಿಸುತ್ತಿದ್ದೇನೆ. ಇದು ಒಂದು ರೀತಿಯ ಆಮ್ಲವಾಗಿದ್ದು ಅದು ನನ್ನ ದೇಹವನ್ನು ಹಾಗೂ ಶ್ವಾಸಕೋಶವನ್ನು ಶುದ್ಧೀಕರಿಸುತ್ತದೆ. ಹೀಗಾಗಿ ನನಗೆ ಇದುವರೆಗೆ ಕೋವಿಡ್ -19 ಸೋಂಕು ತಗುಲಿಲ್ಲ" ಎಂದು ತಿಳಿಸಿದ್ದಾರೆ.
ಪ್ರಗ್ಯಾ ಅವರ ಈ ಹೇಳಿಕೆಯ ವಿಡಿಯೋ ವೈರಲ್ ಆದ ನಂತರ ತೀವ್ರ ಟೀಕೆಗೆ ಗುರಿಯಾದರು. ಆದಾಗ್ಯೂ, ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.