ನವದೆಹಲಿ, ಮೇ 18 (DaijiworldNews/MS): ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ. ಕೆ. ಕೆ. ಅಗರ್ವಾಲ್ ಸೋಮವಾರ ರಾತ್ರಿ 11. 30 ಕ್ಕೆ ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ನಿಧನರಾಗಿದ್ದಾರೆ .ಕೋವಿಡ್ ಸೋಂಕು ತಗುಲಿದ್ದ ಅವರು ಹಲವು ದಿನಗಳಿಂದ ಏಮ್ಸ್ ನಲ್ಲಿ ವೆಂಟಿಲೇಟರ್ ವ್ಯವಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
62 ವರ್ಷದ ಡಾ. ಕೆ. ಕೆ. ಅಗರ್ವಾಲ್ ಖ್ಯಾತ ಹೃದ್ರೋಗ ತಜ್ಞರಾಗಿದ್ದ ಡಾ. ಕೆ. ಕೆ. ಅಗರ್ವಾಲ್ ಹಾರ್ಟ್ ಕೇರ್ ಫೌಂಡೇಷನ್ ಆಫ್ ಇಂಡಿಯಾದ ಮುಖ್ಯಸ್ಥರಾಗಿದ್ದರು. 2005ರಲ್ಲಿ ಡಾ. ಬಿಸಿ ರಾಯ್ ಪ್ರಶಸ್ತಿ, 2010ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದರು.
ದೆಹಲಿಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದ ಡಾ. ಕೆ. ಕೆ. ಅಗರ್ವಾಲ್, ನಾಗ್ಪುರ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿ ಪಡೆದಿದ್ದರು. ಕಳೆದ ವರ್ಷದಿಂದ ಸಾಂಕ್ರಾಮಿಕ ರೋಗ ಕೊವೀಡ್ ಕುರಿತು ಜನಸಾಮಾನ್ಯರಿಗೆ ಮಾಹಿತಿ ನೀಡುವಂತಹ ಹಲವಾರು ವಿಡಿಯೋಗಳನ್ನು ಮಾಡಿ ಅವರು ಟ್ವೀಟ್ ಮಾಡುತ್ತಿದ್ದರು.