ಸೀತಾಪುರ, ಮೇ 17 (DaijiworldNews/SM): ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದ ಬಗ್ಗೆ ಅವರದೇ ಪಕ್ಷದ ಶಾಸಕನೊಬ್ಬ ಅಸಮಾಧಾನ ಹೊರಹಾಕಿದ್ದಾರೆ.
ಈ ನಡುವೆ ಪ್ರತಿಕ್ರಿಯೆ ನೀಡಿರುವ ಶಾಸಕ ರಾಕೇಶ್ ರಾಥೋಡ್, ನಾನು ಹೆಚ್ಚು ಮಾತನಾಡಿದರೇ ನನ್ನ ವಿರುದ್ಧವೂ ದೇಶದ್ರೋಹದ ಪ್ರಕರಣ ದಾಖಲಿಸುತ್ತಾರೆ ಎಂದು ಅವರು ಹೇಳಿದ್ದಾರೆ.
"ಶಾಸಕರಿಗೆ ಪಕ್ಷದಲ್ಲಿ ಯಾವುದೇ ಹೆಚ್ಚಿನ ಸ್ಥಾನಮಾನವಿಲ್ಲ. ನಾವು ಮಾಧ್ಯಮಗಳಿಗೆ ಹೇಳಿಕೆ ನೀಡಿದರೇ, ಮಾತನಾಡಿದರೇ ನಮ್ಮ ಮೇಲೆ ದೇಶದ್ರೋಹ ಪ್ರಕರಣ ದಾಖಲಾಗಬಹುದು" ಎಂದು ಸೀತಾಪುರ ಶಾಸಕ ರಾಕೇಶ್ ರಾಥೋಡ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೀತಾಪುರದಲ್ಲಿ ಸರ್ಕಾರಿ ಆರೋಗ್ಯ ಕೇಂದ್ರ ಮತ್ತೆ ಕಾರ್ಯಗತಗೊಳಿಸುವ ಬಗ್ಗೆ ಮಾತನಾಡಿದ ಶಾಸಕ ರಾಕೇಶ್ ರಾಥೋಡ್, ನಾನು ನನ ಕೈಲಾದಷ್ಟು ಪ್ರಯತ್ನಪಟ್ಟಿದ್ದೇನೆ. ಹಲವು ಕ್ರಮಕೈಗೊಂಡಿದ್ದೇನೆ. ಆದರೆ ಶಾಸಕರಿಗೆ ಪಕ್ಷದಲ್ಲಿ ಎಷ್ಟು ಸ್ಥಾನಮಾನವಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೆಚ್ಚು ಮಾತನಾಡಿದ್ದಲ್ಲಿ ದೇಶದ್ರೋಹ ಆರೋಪ ಹೊರಿಸುತ್ತಾರೆ ಎಂದು ರಾಥೋಡ್ ದೂರಿದ್ದಾರೆ.