ಕಳಸ, ಮೇ 17 (DaijiworldNews/MS): ಆಸ್ಪತ್ರೆಯಿಂದ ಬಂದು ಮನೆಯ ಜಗಲಿಯಲ್ಲಿ ಮಲಗಿದ್ದ ಸೋಂಕಿತ ಅಣ್ಣನನ್ನು ತಮ್ಮನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಭೀಕರ ಘಟನೆ ತಾಲೂಕು ಮರಸಣಿಗೆಯ ಕಂಬಳಗದ್ದೆಯಲ್ಲಿ ಶನಿವಾರ ರಾತ್ರಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಪಾಶ್ವನಾಥ್ ಎಂದು ಗುರುತಿಸಲಾಗಿದೆ.
ಕೊಲೆಯಾದಾತನನ್ನು ಮಹಾವೀರ (45) ಎಂದು ಗುರುತಿಸಲಾಗಿದೆ. ಮಹಾವೀರ್ಗೆ ಕಳೆದ 3 ದಿನಗಳ ಹಿಂದೆ ಸೋಂಕು ತಗುಲಿ ಮೂಡಿಗೆರೆಯ ಎಂಜಿಎಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶುಕ್ರವಾರ ಸಂಜೆ ಆಸ್ಪತ್ರೆಯಲ್ಲಿ ನರ್ಸ್ ವೈದ್ಯರೊಂದಿಗೆ ಮನಸ್ತಾಪ ಮಾಡಿಕೊಂಡು ವಾಪಾಸ್ ಆದ ಪಾಶ್ವನಾಥ್ ಜಗುಲಿಯಲ್ಲಿ ಮಲಗಿದ್ದ. ಮನೆಗೆ ಬಂದಾಗ ಮನೆಯಲ್ಲಿ ಮಹಾವೀರ್ ನನ್ನು ಕಂಡು ಕೊರೊನಾ ಗುಣವಾಗದೆ ಯಾಕೆ ಮನೆಗೆ ಬಂದೆ ಎಂದು ಪಾಶ್ವನಾಥ್ ಪ್ರಶ್ನಿಸಿದ್ದಾನೆ.
ಕೊರೊನಾ ಗುಣವಾಗದೆ ಮನೆಗೆ ಬಂದಿದ್ದಕ್ಕೆ ಜಗಳ ಪ್ರಾರಂಭವಾಗಿ ಹಳೆ ವಿಚಾರ, ಆಸ್ತಿ ವಿಚಾರವೂ ಬಂದು ನಂತರ ಮಾತಿಗೆ ಮಾತು ಬೆಳೆದು ಅಣ್ಣನನ್ನು ಕುತ್ತಿಗೆಯನ್ನು ಕಾಲಿನಿಂದ ಒತ್ತಿ ತುಳಿದು ತಲೆ ಮತ್ತು ಮುಖವನ್ನು ಕತ್ತಿಯಿಂದ ಕೊಚ್ಚಿದ್ದಾನೆ. ಸ್ಥಳದಲ್ಲಿದ್ದ ಮನೆ ಮಂದಿ ಕತ್ತಿಯನ್ನು ಕಸಿದುಕೊಂಡಿದ್ದು ಬಿಡದ ಪಾಶ್ವನಾಥ ಸೌದೆ ಕೊಟ್ಟಿಗೆಯಲ್ಲಿದ್ದ ಕೊಡಲಿಯನ್ನು ತಂದು ಕೊಚ್ಚಿ ಕೊಲೆ ಮಾಡುವ ಮೂಲಕ ಕೌರ್ಯ ಮೆರೆದಿದ್ದಾನೆ.
ತೀವ್ರವಾಗಿ ಗಾಯಗೊಂಡ ಮಹಾವೀರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.