ನವದೆಹಲಿ,ಮೇ 17 (DaijiworldNews/MS): ಭಾರತದ ಕೊರೊನಾ ವಿರುದ್ಧದ ಹೋರಾಟದಲ್ಲಿ ಮಹತ್ವದ ಅಶಾಕಿರಣವಾಗಿರುವ ಕೊವಿಡ್ ಸೋಂಕು ನಿರೋಧಕವಾಗಿ ಕೆಲಸ ಮಾಡಬಲ್ಲ ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿರುವ 2-ಡಿಆಕ್ಸಿ-ಡಿ-ಗ್ಲೂಕೋಸ್ 10 ಸಾವಿರ ಪ್ಯಾಕೆಟ್ಗಳು ಇಂದು ಅನಾವರಣಗೊಳ್ಳಲಿದೆ.
ಹೈದರಾಬಾದ್ನ ಡಾ.ರೆಡ್ಡಿಸ್ ಲ್ಯಾಬ್ನ ಸಹಯೋಗದಲ್ಲಿ ಡಿಆರ್ಡಿಒ ಅಭಿವೃದ್ಧಿಪಡಿಸಿರುವ ಈ ಔಷಧ ಕೊವಿಡ್ ವಿರುದ್ಧದ ಹೋರಾಟದಲ್ಲಿ ಅತ್ಯಂತ ಸಹಕಾರಿಯಾಗಲಿದೆ. ಔಷಧದ ಮೊದಲ ಬ್ಯಾಚ್ ಅನ್ನು ರಕ್ಷಣ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್ ಬಿಡುಗಡೆ ಮಾಡಲಿದ್ದಾರೆ.
ಈ ಔಷಧವೂ ಪುಡಿ ರೂಪದಲ್ಲಿ ಸ್ಯಾಚೆಟ್ಗಳಲ್ಲಿ ಇರಲಿದ್ದು, ನೋಡಲು ಗ್ಲುಕೋಸ್ ಪೌಡರ್ನಂತೆ ಇದ್ದು ಇದನ್ನು ನೀರಿನಲ್ಲಿ ಕರಗಿಸಿ ಇದನ್ನು ಕುಡಿಯಬೇಕು. ಕೊರೊನಾ ವೈರಸ್ ಗೆ ತನ್ನ ಸಂಖ್ಯೆ ವೃದ್ಧಿಸಿಕೊಳ್ಳಬೇಕೆಂದರೆ ಅದಕ್ಕೆ ಗ್ಲುಕೋಸ್ ಅಗತ್ಯವಿದ್ದು, ಈ ಔಷಧವನ್ನು ಗ್ಲುಕೋಸ್ ಎಂದು ಭಾವಿಸಿ ಸೇವಿಸತೊಡಗುತ್ತದೆ. ಆದರೆ ಈ ಔಷಧವು ವೈರಸ್ನೊಳಗೆ ಹೋಗಿ ಅದರ ಸಂತಾನೋತ್ಪತ್ತಿ ಆಗದಂತೆ ನಿಯಂತ್ರಿಸುತ್ತದೆ. ವೈರಸ್ ಯಾವಾಗ ವೇಗವಾಗಿ ತನ್ನ ಸಂಖ್ಯೆಯನ್ನು ದುಪ್ಪಟ್ಟು ಮಾಡುತ್ತಾ ಸಾಗುತ್ತದೆಯೋ , ಆ ಸಮಯದಲ್ಲಿ ದೇಹಕ್ಕೆ ಆಮ್ಲಜನಕದ ಅಗತ್ಯತೆ ತೀರಾ ಹೆಚ್ಚಾಗುತ್ತದೆ. 2ಡಿಜಿ ಔಷಧದಿಂದ ವೈರಸ್ನ ಉತ್ಪತ್ತಿ ಪ್ರಕ್ರಿಯೆ ಸ್ಥಗಿತಗೊಳ್ಳುವ ಕಾರಣ, ಆಮ್ಲಜನಕದ ಸಮಸ್ಯೆಯೂ ಇಲ್ಲವಾಗುತ್ತದೆ. ಅಣುವು ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಪೂರಕ ಆಮ್ಲಜನಕದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿದೆ.
ಕೊರೊನಾ ಸೋಂಕಿತ ಸಂಪೂರ್ಣ ಗುಣಮುಖನಾಗಲು ಸತತ 5ರಿಂದ 7 ದಿನಗಳ ಕಾಲ ಸೇವಿಸಬೇಕಾಗುತ್ತದೆ. ಈ ಔಷಧದ ಒಂದು ಪ್ಯಾಕೆಟ್ನಲ್ಲಿ 5.85 ಗ್ರಾಂ. ಪೌಡರ್ ಇರುತ್ತದೆ. ಇದನ್ನು 25 ಡಿ.ಸೆ.ಗಿಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಿಡಬೇಕಾಗುತ್ತದೆ.