ನವದೆಹಲಿ, ಮೇ.16 (DaijiworldNews/HR): ಕೊರೊನಾ ಲಸಿಕೆಯನ್ನು ವಿದೇಶಕ್ಕೆ ನೀಡಿರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹಣ ಪಡೆದು ದೆಹಲಿಯ ತುಂಬೆಲ್ಲಾ ಪೋಸ್ಟರ್ ಹಾಕಿಸಿರುವ ಕಿಂಗ್ಪಿನ್ ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿರುವ ಬೆನ್ನಲ್ಲೇ 'ನನ್ನನ್ನು ಬಂಧಿಸಿ' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಉದ್ದೇಶಪೂರ್ವಕವಾಗಿ ಗೋಡೆಗಳಿಗೆ ಪೋಸ್ಟರ್ ಅಂಟಿಸಲಾಗುತ್ತಿದ್ದು, ಇದರ ಬೆನ್ನಟ್ಟಿ ಹೋಗಿರುವ ಪೊಲೀಸರಿಗೆ ಇದಾಗಲೇ ಕೆಲವು ಆರೋಪಿಗಳು ಸೆರೆ ಸಿಕ್ಕಿದ್ದು ಅವರು ತಾವು 500-1000 ರೂಪಾಯಿಗಳನ್ನು ಪಡೆದು ಪೋಸ್ಟರ್ ಅಂಟಿಸುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದು, 17 ಮಂದಿಯ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ಇನ್ನು ಮೋದಿಜಿ ಹಮಾರೆ ಬಚ್ಚೋಂಕಿ ವ್ಯಾಕ್ಸಿನ್ ವಿದೇಶ್ ಕ್ಯೂ ಭೇಜ್ ದಿಯಾ (ಮೋದಿಜಿ ನೀವು ನಮ್ಮ ಮಕ್ಕಳ ಲಸಿಕೆಗಳನ್ನು ವಿದೇಶಗಳಿಗೆ ಏಕೆ ಕಳುಹಿಸಿದ್ದೀರಿ?) ಎಂಬ ಬರಹವನ್ನು ಟ್ವೀಟ್ನಲ್ಲಿ ರಾಹುಲ್ ಗಾಂಧಿ ಹಾಕಿಕೊಂಡು, ತಮ್ಮನ್ನೂ ಬಂಧಿಸಿ ಎಂದು ಹೇಳುವ ಮೂಲಕ ಪೋಸ್ಟರ್ ಅಂಟಿಸಿದವರ ಪರವಾಗಿ ನಿಂತಿದ್ದಾರೆ.