ನವದೆಹಲಿ, ಮೇ.16 (DaijiworldNews/PY): "ಭಾರತ ಹಾಗೂ ಬ್ರಿಟನ್ನಲ್ಲಿ ಮೊದಲ ಬಾರಿಗೆ ಪತ್ತೆಯಾಗಿರುವ ಕೊರೊನಾ ವೈರಸ್ಗಳ ವಿರುದ್ದ ಕೋವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿಯಾಗಿದೆ" ಎಂದು ಲಸಿಕೆ ತಯಾರಕ ಸಂಸ್ಥೆ ಭಾರತ್ ಬಯೋಟೆಕ್ ರವಿವಾರ ತಿಳಿಸಿದೆ.
"ಇದು, ಐಸಿಎಂಆರ್ ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದಲ್ಲಿ ನಡೆಸಿದ ಅಧ್ಯಯನದ ವರದಿಯಲ್ಲಿ ದಾಖಲಾಗಿದೆ" ಎಂದು ಮಾಹಿತಿ ನೀಡಿದೆ.
"ಈ ಲಸಿಕೆಯು, ಭಾರತದಲ್ಲಿ ಪ್ರಥಮ ಬಾರಿಗೆ ಪತ್ತೆಯಾದ ಬಿ.1.617 ಮಾದರಿ ತಟಸ್ಥಗೊಳಿಸುವಲ್ಲಿ ಪರಿಣಾಮಕಾರಿಯಾಗಿದೆ. ಅಲ್ಲದೇ ಬ್ರಿಟನ್ನಲ್ಲಿ ಮೊದಲು ಕಾಣಿಸಿಕೊಂಡ ಬಿ.1.1.7 ಹಾಗೂ ಲಸಿಕೆ ತಳಿ ಡಿ614ಜಿ ಮಧ್ಯದ ತಟಸ್ಥೀಕರಣದಲ್ಲಿ ಯಾವುದೇ ರೀತಿಯಾದ ಬದಲಾವಣೆ ಕಂಡಬಂದಿಲ್ಲ" ಎಂದಿದೆ.
"ದೇಶದಲ್ಲಿ ಈವರೆಗೆ 18,22,20,164 ಲಸಿಕೆ ಡೋಸ್ಗಳನ್ನು ನೀಡಲಾಗಿದೆ" ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.