ಬೆಂಗಳೂರು, ಮೇ.16 (DaijiworldNews/PY): "ಮೇ 17ರಿಂದ ಮೇ 23ರವರೆಗಿನ ಬಳಕೆಗಾಗಿ ಕೇಂದ್ರ ಸರ್ಕಾರವು ವಿವಿಧ ರಾಜ್ಯಗಳಿಗೆ 23 ಲಕ್ಷ ವಯಲ್ಸ್ ರೆಮ್ಡಿಸಿವರ್ ಚುಚ್ಚುಮದ್ದು ಹಂಚಿಕೆ ಮಾಡಿದ್ದು, ಈ ಪೈಕಿ ಕರ್ನಾಟಕಕ್ಕೆ 4.25 ಲಕ್ಷ ವಯಲ್ಸ್ ರೆಮ್ಡಿಸಿವರ್ ಚುಚ್ಚುಮದ್ದು ನೀಡಲಾಗಿದೆ" ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
"ಕೇಂದ್ರ ಸರ್ಕಾರವು ಎಪ್ರಿಲ್ 21ರಿಂದ ಇಲ್ಲಿಯವರೆಗೆ ಒಟ್ಟು 6 ಲಕ್ಷ ವಯಲ್ಸ್ ರೆಮ್ಡಿಸಿವರ್ ಔಷಧವನ್ನು ವಿವಿಧ ರಾಜ್ಯಗಳಿಗೆ ಹಂಚಿಕೆ ಮಾಡಿದ್ದು, ಆ ಪೈಕಿ 10 ಲಕ್ಷ ವಯಲ್ಸ್ ರೆಮ್ಡಿಸಿವರ್ ಔಷಧ ಕರ್ನಾಟಕಕ್ಕೆ ದೊರೆತಿದೆ. ಕರ್ನಾಟಕ ಈ ಬಾರಿ ಎಲ್ಲಾ ರಾಜ್ಯಗಳಿಗಿಂತ ಅಧಿಕ ರೆಮ್ಡಿಸಿವರ್ ಪಡೆದಿದೆ. ಮಹಾರಾಷ್ಟ್ರದ ಬಳಿ ಹೆಚ್ಚು ರೆಮ್ಡಿಸಿವರ್ ಪಡೆದ ರಾಜ್ಯ ಕರ್ನಾಟಕವಾಗಿದೆ" ಎಂದಿದ್ದಾರೆ.
"ರಾಜ್ಯದಲ್ಲಿರುವ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆಯನ್ನಾಧರಿಸಿ ರೆಮ್ಡಿಸಿವರ್ ಔಷಧವನ್ನು ಹಂಚಿಕೆ ಮಾಡಲಾಗುತ್ತದೆ. ಹಾಗಾಗಿ ಈ ಬಾರಿ ಕರ್ನಾಟಕಕ್ಕೆ ಹೆಚ್ಚು ರೆಮ್ಡಿಸಿವರ್ ಔಷಧ ಹಂಚಿಕೆಯಾಗಿದೆ" ಎಂದು ಹೇಳಿದ್ದಾರೆ.