ಪಂಜಾಬ್, ಮೇ.16 (DaijiworldNews/HR): ಪಂಜಾಬ್ನ ಜಲಂಧರ್ನ ವ್ಯಕ್ತಿಯೊಬ್ಬ ತನ್ನ 11 ವರ್ಷದ ಮಗಳ ಶವವನ್ನು ಭುಜದ ಮೇಲೆ ಹೊತ್ತೊಕೊಂಡು ಶವಾಗಾರಕ್ಕೆ ತೆರಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದಿನನಿತ್ಯದ ಪಂತದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು , ಈ ಘಟನೆಯ ಬಗ್ಗೆ ತನಿಖೆ ನಡೆಸಲು ಜಿಲ್ಲಾ ಅಧಿಕಾರಿಗಳನ್ನು ಪ್ರೇರೇಪಿಸಿದೆ.
ಮೇ 10 ರಂದು ಕೆಲವು ದಾರಿಹೋಕರು ಚಿತ್ರೀಕರಿಸಿದ ವೀಡಿಯೊದಲ್ಲಿ, ದಿಲೀಪ್ ತನ್ನ ಮಗಳು ಸೋನು ಅವರ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಶವಸಂಸ್ಕಾರಕ್ಕೆ ಕರೆದೊಯ್ಯುವುದನ್ನು ಕಾಣಬಹುದು, ತಂದೆಯೊಂದಿಗೆ ಆತನ ಮಗನನ್ನು ವಿಡಿಯೋದಲ್ಲಿ ಕಾಣಬಹುದು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಒಡಿಶಾದ ವಲಸೆ ಕಾರ್ಮಿಕ ದಿಲೀಪ್, ತಮ್ಮ ಮಗಳಿಗೆ ಜ್ವಎಅ ಕಾಣಿಸಿಕೊಂಡಕಾರಣ ಜಲಂಧರ್ ಆಸ್ಪತ್ರೆಯ ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆಗಾಗಿ ಅಮೃತಸರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಮೇ 9 ರ ಸಂಜೆ ಅಮೃತಸರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಬಳಿಕ ಅವಳ ಮೃತದೇಹವನ್ನು ಜಲಂಧರ್ನ ರಾಮ್ನಗರದಲ್ಲಿರುವ ನಮ್ಮ ಮನೆಗೆ ಕರೆತಂದು ಅವಳ ಸಾವಿನ ಬಗ್ಗೆ ನೆರೆಹೊರೆಯವರಿಗೆ ತಿಳಿಸಿ ಸಹಾಯ ಕೇಳಿದಾಗ ಅವಳಿಗೆ ಕೊರೊನಾ ಇರಬಹುದೆಂಬ ಭಯದಿಂದ ಯಾರೊಬ್ಬರು ಸಹಾಯಕ್ಕೆ ಬರಲಿಲ್ಲ ಹಾಗಾಗಿ ನಾನೊಬ್ಬನೆ ಶವವನ್ನು ಭುಜದ ಮೇಲೆ ಹೊತ್ತೊಕೊಂಡು ಶವಾಗಾರಕ್ಕೆ ತೆರಳಿದ್ದೇನೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ನಂತರ ಇಡೀ ಘಟನೆಯ ಬಗ್ಗೆ ತನಿಖೆ ನಡೆಸಲು ಜಲಂಧರ್ ಜಿಲ್ಲಾಧಿಕಾರಿ ಘಾನ್ಶ್ಯಾಮ್ ಥೋರಿ ಆದೇಶಿಸಿದ್ದಾರೆ.
ಇನ್ನು ಸಬ್ ಡಿವಿಶನಲ್ ಮ್ಯಾಜಿಸ್ಟ್ರೇಟ್ ನಡೆಸಿದ ತನಿಖೆಯ ಪ್ರಕಾರ, ಬಾಲಕಿಗೆ ಕೊರೊನಾ ದೃಢಪಟ್ಟಿರಲಿಲ್ಲ ಅವಳ ಸಾವಿಗೆ ಕೊರೊನಾ ಕಾರಣವಲ್ಲ ಎಂದು ಜಿಲ್ಲಾಧಿಕಾರಿ ಹೇಳಿ ದಿಲೀಪ್ ಕುಟುಂಬಕ್ಕೆ ಸಂಪೂರ್ಣ ಬೆಂಬಲವನ್ನು ನೀಡಿದರು.