ನವದೆಹಲಿ, ಮೇ.16 (DaijiworldNews/HR): ಪೆಟ್ರೋಲ್ ಹಾಗೂ ಡಿಸೇಲ್ ದರದಲ್ಲಿ ರವಿವಾರವೂ ಏರಿಕೆ ಕಂಡಿದ್ದು, ಪೆಟ್ರೋಲ್ ಪ್ರತೀ ಲೀಟರ್ ಬೆಲೆ 24 ರಿಂದ 26 ಪೈಸೆ ಹಾಗೂ ಪ್ರತೀ ಲೀಟರ್ ಡಿಸೇಲ್ ದರ 28-30 ಪೈಸೆಯಷ್ಟು ಏರಿಕೆಯಾಗಿದೆ.
ಸಾಂಧರ್ಭಿಕ ಚಿತ್ರ
ಇಂದು ಮತ್ತೆ ಪೆಟ್ರೋಲ್ ಹಾಗೂ ಡಿಸೇಲ್ ದರ ಏರಿಯಾಗುವ ಮೂಲಕ ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್ ದರ 100 ರೂ ಗಡಿದಾಟಿದೆ.
ಇನ್ನು ಕಳೆದೊಂದು ವಾರದ ಅಂತರದಲ್ಲಿ ಸತತ ನಾಲ್ಕನೇ ಬಾರಿಗೆ ತೈಲೋತ್ಪನ್ನಗಳ ದರ ಏರಿಕೆ ಮಾಡಲಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ 92.64ರೂ ಮತ್ತು ಡೀಸೆಲ್ 83.28ರೂ ಗೆ ಏರಿಕೆಯಾಗಿದ್ದು, ಕೋಲ್ಕತಾದಲ್ಲಿ ಪೆಟ್ರೋಲ್ 92.72ರೂ, ಡೀಸೆಲ್ 86.12 ರೂಗೆ ಹೆಚ್ಚಳವಾಗಿದ್ದು, ಮುಂಬೈನಲ್ಲಿ ಪೆಟ್ರೋಲ್ 98.93ರೂ, ಡೀಸೆಲ್ 90.45ರೂ ಏರಿಕೆಯಾದರೆ ಚೆನ್ನೈನಲ್ಲಿ ಪೆಟ್ರೋಲ್ ದರ 94.36ರೂ ಮತ್ತು ಡೀಸೆಲ್ 88.12ರೂ ಗೆ ಏರಿಕೆಯಾಗಿದೆ.
ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್ 95.72ರೂ ಹಾಗೂ ಡೀಸೆಲ್ 88.28ರೂಗೆ ಏರಿಕೆಯಾಗಿದೆ.