ನವದೆಹಲಿ, ಮೇ.15 (DaijiworldNews/HR): ಹೆಚ್ಚು ಪಾಸಿಟಿವ್ ಪ್ರಕರಣ ಇರುವ ಪ್ರದೇಶಗಳಲ್ಲಿ ಆರ್ಟಿ- ಪಿಸಿಆರ್, ರಾಪಿಡ್ ಟೆಸ್ಟ್ ಗಳನ್ನು ಹೆಚ್ಚಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಕುರಿತು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, "ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳು ಬಂದರೂ ಯಾವುದೇ ಒತ್ತಡಕ್ಕೊಳಗಾಗದೆ ಕೊರೊನಾ ಸಂಖ್ಯೆಗಳ ಪಾರದರ್ಶಕ ವರದಿಯನ್ನು ರಾಜ್ಯಗಳು ಪ್ರೋತ್ಸಾಹಿಸಬೇಕು" ಎಂದರು.
ಇನ್ನು ಗ್ರಾಮೀಣ ಪ್ರದೇಶದಲ್ಲಿ ಮನೆ ಬಾಗಿಲಿಗೆ ಕೊರೊನಾ ಪರೀಕ್ಷೆ, ಕಣ್ಗಾವಲಿನ ಕಡೆಗೆ ಗಮನ ಹರಿಸಿ ಆರೋಗ್ಯ ಸಂಪನ್ಮೂಲಗಳನ್ನು ಹೆಚ್ಚಿಸಬೇಕು ಎಂದು ಶನಿವಾರ ಪ್ರಧಾನಿ ಕರೆ ನೀಡಿದ್ದಾರೆ.
"ಕೊರೊನಾದ ಮೊದಲ ಅಲೆಯಲ್ಲಿ ಗ್ರಾಮೀಣ ಪ್ರದೇಶಗಳು ಹೆಚ್ಚಿನ ಭಾದಿತವಾಗಿರಲಿಲ್ಲ. ಆದರೆ, ಎರಡನೇ ಅಲೆಯಲ್ಲಿ ಅನೇಕ ರಾಜ್ಯಗಳಲ್ಲಿ ಗ್ರಾಮೀಣ ಪ್ರದೇಶಗಳೂ ಗಂಭೀರ ಪರಿಣಾಮ ಎದುರಿಸುತ್ತಿದ್ದು, ಎಲ್ಲಾ ಅಗತ್ಯ ಸಲಕರಣೆಗಳೊಂದಿಗೆ ಅಂಗನವಾಡಿ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರನ್ನು ಬಲಪಡಿಸಬೇಕು" ಎಂದಿದ್ದಾರೆ.
ಇನ್ನು ಹೆಚ್ಚಿನ ಪಾಸಿಟಿವ್ ಪ್ರಕರಣಗಳಿರುವ ಪ್ರದೇಶಗಳಲ್ಲಿ ಆರ್ ಟಿ- ಪಿಸಿಆರ್, ರಾಪಿಡ್ ಟೆಸ್ಟ್ ಗಳನ್ನು ಹೆಚ್ಚಿಸಬೇಕು ಎಂದು ಮೋದಿ ಹೇಳಿದರು.ಮಾರ್ಚ್ ಆರಂಭದಲ್ಲಿ ವಾರಕ್ಕೆ ಸುಮಾರು 50 ಲಕ್ಷ ಪರೀಕ್ಷೆಗಳನ್ನು ಮಾಡಲಾಗುತಿತ್ತು. ಅದು ಈಗ ವಾರಕ್ಕೆ ಸುಮಾರು 1.3 ಕೋಟಿಗೆ ಹೆಚ್ಚಳವಾಗಿದೆ ಎಂದು ಪಿಎಂಒ ಕಚೇರಿ ತಿಳಿಸಿದೆ.