ನವದೆಹಲಿ, ಮೇ 15 (DaijiworldNews/MB) : ಇತ್ತೀಚಿನ ವರ್ಷಗಳಲ್ಲಿ ದೇಶದ ಪ್ರಗತಿಯನ್ನು ಪ್ರಶ್ನಿಸಿದ್ದ ಕೇಂದ್ರ ಮಾಜಿ ಸಚಿವ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ವಿರುದ್ದ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ, ಭಾರತದ ಸಂಸ್ಕೃತಿಯನ್ನು ಗೇಲಿ ಮಾಡುವುದೇ ತರೂರ್ ಅವರ ನೆಚ್ಚಿನ ಹವ್ಯಾಸವಾಗಿ ಬಿಟ್ಟಿದೆ ಎಂದು ಟೀಕಿಸಿದೆ.

ಟ್ವೀಟ್ ಒಂದನ್ನು ಮಾಡಿದ್ದ ತರೂರ್, "ಬಿಜೆಪಿ ನಮ್ಮ ಚಿತ್ರಣವನ್ನು ಗೀಳಾಗಿಸಿದೆ, ದಶಕಗಳಿಂದ, ಜಗತ್ತು ಭಾರತವನ್ನು ಹಾವಾಡಿಗರ ಭೂಮಿಯಾಗಿ ನೋಡಿದೆ. ಕಳೆದ 25 ವರ್ಷಗಳಲ್ಲಿ ಭಾರತವು ವೈದ್ಯರು ಹಾಗೂ ಕಂಪ್ಯೂಟರ್ ನಿರ್ವಾಹಕರ ನೆಲೆಯಾಯಿತು. ಈಗ ನಾವು ಜನರು ಹಸುವಿನ ಮೂತ್ರವನ್ನು ಕುಡಿಯುವ ಮತ್ತು ಹಸುವಿನ ಸೆಗಣಿಯಿಂದ ಸ್ನಾನ ಮಾಡುವ ಭೂಮಿಯಾಗಿದೆ ಎಂದು ಲೇವಡಿ ಮಾಡಿದ್ದು, ಇದು ಪ್ರಗತಿಯೇ ಎಂದು ಪ್ರಶ್ನಿಸಿದ್ದಾರೆ.
ಇನ್ನು ತರೂರ್ ಅವರ ಟ್ವೀಟ್ನ ಸ್ಕ್ರೀನ್ಶಾಟ್ ಅನ್ನು ಉಲ್ಲೇಖಿಸಿ ಬಿಜೆಪಿ ರಾಜ್ಯಸಭಾ ಸದಸ್ಯ ಡಾ.ವಿನಯ್ ಸಹಸ್ರಬುದ್ಧೆ ಅವರು ಟ್ವೀಟ್ ಮಾಡಿದ್ದು, "ಭಾರತದ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಪರಂಪರೆಯನ್ನು ಗೇಲಿ ಮಾಡುವುದು ನಿಮ್ಮ ನೆಚ್ಚಿನ ಹವ್ಯಾಸವಾಗಿದೆ ಎಂದು ಹೇಳಿದ್ದಾರೆ.
ಇನ್ನು ಮತ್ತೊಂದು ಟ್ವೀಟ್ನಲ್ಲಿ, ನಿಮ್ಮ ಪಕ್ಷದ ಹಿರಿಯ ಸಹೋದ್ಯೋಗಿ ಆಸ್ಕರ್ ಫರ್ನಾಂಡಿಸ್ ಜಿ ಅವರ ಮಾತುಗಳನ್ನು ಕೇಳಲು ನಿಮಗೆ ಮುಕ್ತ ಮನಸ್ಸು ಇದ್ದರೆ, ಈಗ ನೀವು ಈ ಶಶಿ ತರೂರ್ ಜಿ ಅವರ ಮಾತುಗಳನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಸಹಸ್ರಬುದ್ಧೆ ಹಂಚಿಕೊಂಡ ವರದಿಯಲ್ಲಿ, ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಫರ್ನಾಂಡಿಸ್ ಅವರು ಮೀರತ್ನಲ್ಲಿ ಹಸುವಿನ ಮೂತ್ರವನ್ನು ಕುಡಿಯುವ ಮೂಲಕ ತಮ್ಮ ಕ್ಯಾನ್ಸರ್ ಅನ್ನು ಗುಣಪಡಿಸಿದ್ದಾರೆಂದು ಹೇಳಿಕೊಂಡಿದ್ದಾರೆ . ಹಾಗೆಯೇ 'ವಜ್ರಾಸನ' ಮಾಡುವುದರ ಮೂಲಕ ಮೊಣಕಾಲು ನೋವನ್ನು ಗುಣಪಡಿಸಿಕೊಂಡ ಬಗ್ಗೆಯೂ ಹೇಳಿದ್ದಾರೆ.
ಇನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು "ನಿಮ್ಮ ಟ್ವೀಟ್ ನೀವು ಇತ್ತೀಚಿನ ದಿನಗಳಿಂದ ನೀವು ಓದಿರುವುದನ್ನು ಒಳಗೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಎರಡು ಲಸಿಕೆಗಳನ್ನು ಉತ್ಪಾದನೆ ಮಾಡುತ್ತಿದೆ. ಸೌಮ್ಯ ಗುಣಲಕ್ಷಣ ಇರುವವರಿಗೆ ಎರಡು ಔಷಧಿಗಳು ಇವೆ. ನಿಮಗೆ ಅಗತ್ಯವಿದ್ದರೆ ನಾನು ನಿಮಗಾಗಿ ಇನ್ನೂ 100 ಅಂಶಗಳನ್ನು ಉಲ್ಲೇಖಿಸಬಹುದು ಎಂದಿದ್ದಾರೆ.