ಆಂಧ್ರಪ್ರದೇಶ, ಮೇ.15 (DaijiworldNews/HR): ಮೂವರು ಯುವಕರು 21 ವರ್ಷದ ಯುವತಿಯನ್ನು ಆಕೆಯ ಸ್ನೇಹಿತನ ಎದುರೇ ಸಾಮೂಹಿಕ ಅತ್ಯಾಚಾರ ಮಾಡಿ ಬ್ಲ್ಯಾಕ್ ಮೇಲ್ ಮಾಡಲು ಆಕೆಯ ನಗ್ನ ಪೋಟೊಗಳನ್ನು ತೆಗೆದಿರುವ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಎರಡು ವಾರಗಳ ಹಿಂದೆ ಯುವತಿಯು ತನ್ನ ಸ್ನೇಹಿತನೊಂದಿಗೆ ಕೊಮರಗಿರಿಪಟ್ಟಣಂ ಕಡದರಿ ಬೀಚ್ಗೆ ಹೋಗಿದ್ದಾಗ ಈ ಘಟನೆ ನಡೆದಿದೆ.
ಮೂವರು ಯುವಕರು ಯುವತಿಯನ್ನು ತಮ್ಮೊಂದಿಗೆ ಬರಲು ಒತ್ತಾಯಿಸಿದ್ದು ಅದನ್ನು ತಡೆದ ಆಕೆಯ ಸ್ನೇಹಿತನನ್ನು ಹೊಡೆದು, ಕಟ್ಟಿಹಾಕಿ ಆತನ ಮುಂದೆಯೇ ಅತ್ಯಾಚಾರ ಎಸಗಿದ್ದು, ಬಳಿಕ ಯುವತಿಯ ನಗ್ನ ಪೋಟೊಗಳನ್ನು ಕ್ಲಿಕ್ ಮಾಡಿದ್ದಾರೆ.
ವರದಿಯ ಪ್ರಕಾರ, ಯುವತಿಯರು ಮಹಿಳೆಯ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದು, ಯುವತಿಯು ಪೊಲೀಸರಿಗೆ ದೂರು ನೀಡಿರಲಿಲ್ಲ.
ಇನ್ನು ಈ ಇಡೀ ಘಟನೆಯನ್ನು ತಮ್ಮ ಕುಟುಂಬ ಸದಸ್ಯರಿಗೆ ಆಕೆ ವಿವರಿಸಿದ್ದು, ಬಳಿಕ ಅವರು ಮೂವರು ಯುವಕರ ವಿರುದ್ಧ ದೂರು ದಾಖಲಿಸಿದರು.
ವಿವಿಧ ವಿಭಾಗಗಳ ಅಡಿಯಲ್ಲಿ ಆಂಧ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಲಾಗಿದೆ.