ನವದೆಹಲಿ, ಮೇ 15 (DaijiworldNews/MS): ಭಾರತದಲ್ಲಿ ತಾಂಡವವಾಡುತ್ತಿರುವ ಕೊರೊನಾ ವೈರಸ್ ಎರಡನೇ ಅಲೆಯ ಪರಿಣಾಮ ಜನ ಆಕ್ಸಿಜನ್ ಪಡೆಯಲು ಒದ್ದಾಡುತ್ತಿರುವಾಗ, ಪ್ರಧಾನ ಮಂತ್ರಿ ಮೋದಿಯವರ ಸಂಪುಟ ಸಚಿವರು ಕೊರೊನಾ ಒತ್ತಡದಿಂದ ದೂರವಿರಲು ಡಾರ್ಕ್ ಚಾಕೊಲೇಟ್ ತಿನ್ನಲು ಸಲಹೆ ನೀಡುತ್ತಾರೆ ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನ ಮಂತ್ರಿ ಮೋದಿ ನೇತೃತ್ವದ ಸಂಪುಟ ಸರ್ಕಾರವನ್ನು ಆಗಾಗ್ಗೆ ಟೀಕಿಸುತ್ತಿರುವ ಒವೈಸಿ ಮತ್ತೊಮ್ಮೆ ಕೇಂದ್ರದ ವಿರುದ್ದ ಹರಿಹಾಯ್ದಿದ್ದು, ಭಾರತೀಯರು ಕೊರೊನಾ ಸೋಂಕಿನಿಂದ ಆಮ್ಲಜನಕ ದೊರಕದೆ ಒದ್ದಾಡುತ್ತಿರುವಾಗ ದೇಶದ ಆರೋಗ್ಯ ಸಚಿವ ಹರ್ಷ್ ವರ್ಧನ ಒತ್ತಡವನ್ನು ದೂರವಿಡಲು ಡಾರ್ಕ್ ಚಾಕೊಲೇಟ್ ತಿನ್ನಲು ಹೇಳುತ್ತಾರೆ. ಪ್ರಧಾನ ಮಂತ್ರಿಗಳ ನರೇಂದ್ರ ಮೋದಿಯವರು ತಾವೇ ಆಯ್ಕೆ ಮಾಡಿರುವ ಮಂತ್ರಿಗಳ ಹಾಗೂ ಸರ್ಕಾರದ ಸ್ವರೂಪವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಮುಂದುವರಿಸಿ ಟ್ವೀಟ್ ಮಾಡಿರುವ ಅವರು " ಜನರ ಜೀವ ಉಳಿಸಲು ಸರ್ಕಾರ ಯಾವುದೇ ತುರ್ತು ಕ್ರಮಗಳನ್ನು ಕೈಗೊಳ್ಳುತ್ತಿಲ್ಲ" ಎಂದು ಆರೋಪಿಸಿದ್ದಾರೆ.