ಮುಂಬೈ, ಮೇ.15 (DaijiworldNews/HR): ಭಾರತದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಭಾರತಕ್ಕೆ ಸಹಾಯ ಮಾಡಲು ಕುವೈತ್ ಹಡಗು ಮುಂಬೈನ ನಾವಾ ಶೆವಾ ಬಂದರಿಗೆ ಇಂದು ಮೂರು ದ್ರವ ವೈದ್ಯಕೀಯ ಆಮ್ಲಜನಕದ (ತಲಾ 25 ಮೆಟ್ರಿಕ್ ಟನ್) ಮತ್ತು 1000 ಆಮ್ಲಜನಕ ಸಿಲಿಂಡರ್ಗಳನ್ನು ಹೊತ್ತುಕೊಂಡು ಬಂದಿದೆ.
ದೇಶದ ಆರೋಗ್ಯ ಮೂಲಸೌಕರ್ಯಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡಲು ಹೆಚ್ಚು ಅಗತ್ಯವಿರುವ ಆಮ್ಲಜನಕ ನೀಡಿದಕ್ಕಾಗಿ ಕುವೈತ್ ರಾಜ್ಯ ಮತ್ತು ಕುವೈತ್ ಸರ್ಕಾರದ ಅಮೀರ್ ಹೆಚ್.ಎಚ್. ಶೇಖ್ ನವಾಫ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾ ಅವರಿಗೆ ವಿದೇಶಾಂಗ ಸಚಿವಾಲಯದ (ಇಎಎಂ) ವಕ್ತಾರ ಅರಿಂದಮ್ ಬಾಗ್ಚಿ ಕುವೈತ್ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇನ್ನು ಕಳೆದ ವಾರ ಕುವೈತ್ನಿಂದ 282 ಆಮ್ಲಜನಕ ಸಿಲಿಂಡರ್ಗಳು, 60 ಆಮ್ಲಜನಕ ಸಾಂದ್ರಕಗಳು, ವೆಂಟಿಲೇಟರ್ಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳ ಸಾಗಣೆಯು ಭಾರತವನ್ನು ತಲುಪಿ ದೇಶಕ್ಕೆ ಎರಡನೇ ಅಲೆಯ ಕೊರೊನಾ ವಿರುದ್ಧ ಹೋರಾಡಲು ಸಹಾಯ ಮಾಡಿದೆ.