ಭೋಪಾಲ್, ಮೇ.14 (DaijiworldNews/HR): ಮಧ್ಯಪ್ರದೇಶದ ನರ್ಸ್ ಒಬ್ಬರು ಕೇವಲ ಒಂದು ಶ್ವಾಸಕೋಶವಿದ್ದರು ಕೂಡ ಕೊರೊನಾವನ್ನು ಸೋಲಿಸಿ ಬದುಕುಳಿದ ಘಟನೆ ನಡೆದಿದೆ.
ತನ್ನ ಬಾಲ್ಯದಲ್ಲಿ ಶ್ವಾಸಕೋಶವೊಂದನ್ನು ಕಳೆದುಕೊಂಡಿದ್ದ ಮಧ್ಯಪ್ರದೇಶದ 39 ವರ್ಷದ ನರ್ಸ್ ಹದಿನಾಲ್ಕು ದಿನಗಳಲ್ಲಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ.
ಟಿಕಮ್ಗರ್ ಆಸ್ಪತ್ರೆಯ ಸಿಒವಿಐಡಿ ವಾರ್ಡ್ನಲ್ಲಿದ್ದ ನರ್ಸ್ಗೆ ಸೋಂಕು ತಗುಲಿದ್ದು, ಅವರಿಗೆ ಚಿಕಿತ್ಸೆ ಫಲಿಸುವುದು ಕಷ್ಟಕರವಾಗಬಹುದೆಂದು ವೈದ್ಯರು ಯೋಚಿಸಿದ್ದರು. ಆದರೆ ಹದಿನಾಲ್ಕು ದಿನಗಳ ಕಾಲ ಮನೆಯಲ್ಲಿ ಪ್ರತ್ಯೇಕವಾಗಿ ಇದ್ದು, ನರ್ಸ್ ವೈರಸ್ನಿಂದ ಚೇತರಿಸಿಕೊಂಡಿದ್ದಾರೆ.
ಚೇತರಿಸಿಕೊಂಡ ಬಳಿಕ ಮಾತನಾಡಿದ ಅವರು, "ನಾನು ಮನೆಯಲ್ಲಿ ಹೋಂ ಐಸೋಲೇಟ್ ಆಗಿದ್ದು ಆ ಸಮಯದಲ್ಲಿ ಧೈರ್ಯ ಕಳೆದುಕೊಂಡಿರಲಿಲ್ಲ. ಜೊತೆಗೆ ಯೋಗ, ಪ್ರಾಣಾಯಾಮ, ಉಸಿರಾಟದ ವ್ಯಾಯಾಮ ಮಾಡುತ್ತಿದ್ದೆ ಇವೆಲ್ಲವು ನನ್ನ ಶ್ವಾಸಕೋಸದ ತೊಂದರೆಗೆ ಸಹಾಯ ಮಾಡುತ್ತದೆ" ಎಂದರು.
ಇನ್ನು ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲೆಯಲ್ಲಿ 226 ಗ್ರಾಮ ಪಂಚಾಯಿತಿಗಳು ಒಂದು ಕೂಡ ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ. ಗ್ರಾಮಸ್ಥರು ಮಾಸ್ಕ್ ಗಳನ್ನು ಧರಿಸುವುದರ ಜೊತೆಗೆ ಸಾಮಾಜಿಕ ಅಂತರಗಳನ್ನು ಕಾಯ್ದುಕೊಂಡಿದ್ದು, ಕೊರೊನಾ ಪ್ರೋಟೋಕಾಲ್ಗಳನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುತ್ತಿದೆ.