ಹೈದರಾಬಾದ್, ಮೇ.14 (DaijiworldNews/PY): "ರಷ್ಯಾದ ಕೊರೊನಾ ವೈರಸ್ ಲಸಿಕೆ ಸ್ಪುಟ್ನಿಕ್ ವಿ ಯ ಆಮದು ಡೋಸ್ಗಳಿಗೆ 948 ರೂ. ಹಾಗೂ ಶೇ.5ರಷ್ಟು ಜಿಎಸ್ಟಿ (995.40 ರೂ.) ವೆಚ್ಚವಾಗಲಿದೆ" ಎಂದು ಡಾ. ರೆಡ್ಡಿಸ್ ಶುಕ್ರವಾರ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ರೆಡ್ಡೀಸ್ ಲ್ಯಾಬ್ ಮಾಹಿತಿ ನೀಡಿದ್ದು, "ಶುಕ್ರವಾರ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದ್ದು, ಪ್ರತಿ ಡೋಸ್ ಲಸಿಕೆ ದರ 948 ರೂ. ಗೆ ನಿಗದಿಪಡಿಸಲಾಗಿದೆ. ಶೇ.5ರಷ್ಟು ಜಿಎಸ್ಟಿ ದರ ಸೇರಿ ಪ್ರತಿ ಡೋಸ್ ಲಸಿಕೆ ಬೆಲೆ 995.40 ರೂ. ಗೆ ನೀಡಲಾಗುತ್ತಿದೆ" ಎಂದಿದೆ.
"ಮುಂಬರುವ ತಿಂಳುಗಳಲ್ಲಿ ಹೆಚ್ಚಿನ ಡೋಸ್ ಲಸಿಕೆಗಳ ಸರಕುಗಳನ್ನು ನಿರೀಕ್ಷಿಲಾಗಿದೆ. ಸ್ಪುಟ್ನಿಕ್ ವಿ ಲಸಿಕೆ ಸರಬರಾಜು ಭಾರತೀಯ ಉತ್ಪಾದನಾ ಪಾಲುದಾರರಿಂದ ಪ್ರಾರಂಭವಾಗಲಿದೆ" ಎಂದು ಡಾ. ರೆಡ್ಡಿ ತಿಳಿಸಿದ್ದಾರೆ.
ಮುಂದಿನ ವಾರದಿಂದ ದೇಶಾದ್ಯಂತ ಮಾರುಕಟ್ಟೆಗಳಲ್ಲಿ ಸ್ಪುಟ್ನಿಕ್ ಲಸಿಕೆ ಲಭ್ಯವಿರಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ಘೋಷಣೆ ಮಾಡಿತ್ತು.
ಲಸಿಕೆಗೆ ಭಾರೀ ಬೇಡಿಕೆ ವ್ಯಕ್ತವಾದ ಹಿನ್ನೆಲೆ ಸ್ಪುಟ್ನಿಕ್ ಕೊರೊನಾ ಲಸಿಕೆ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ.