ಬೆಂಗಳೂರು, ಮೇ.14 (DaijiworldNews/PY): "ಬಡವರ ಹಾಗೂ ಕೂಲಿ ಕಾರ್ಮಿಕರ ಕುರಿತು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದ್ದಾರೆ" ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಗೋವಿಂದರಾಜನಗರ ಬಿಜಿಎಸ್ ಗ್ರೌಂಡ್ ನಲ್ಲಿ ಬಾಲಗಂಗಾಧರನಾಥ ಕಂಚಿನ ಪ್ರತಿಮೆ ಅನಾವರಣ ಮಾಡಿ ಬಳಿಕ ಮಾತನಾಡಿದ ಅವರು, "ನಗರಕ್ಕೆ 60 ಸಾವಿರ ವ್ಯಾಕ್ಸಿನ್ ಬಂದಿದ್ದು, ವ್ಯಾಕ್ಸಿನ್ಗೆ ತೊಂದರೆ ಆಗಲ್ಲ. ಎರಡು ದಿನಗಳಲ್ಲಿ ವ್ಯಾಕ್ಸಿನ್ ಸಮಸ್ಯೆ ಬಗೆಹರಿಯಲಿದೆ. ಈ ಹಿಂದೆ ಜನರು ಲಸಿಕೆಯ ಬಗ್ಗೆ ಅಸಡ್ಡೆ ಮಾಡಿದ್ದರು, ಈಗ ಬೇಡಿಕೆ ಮಾಡುತ್ತಿದ್ದಾರೆ. ಈ ಬಗ್ಗೆ ತಜ್ಞರ ಸಮಿತಿ ಸಲಹೆ ನೀಡಿದೆ" ಎಂದಿದ್ದಾರೆ.
"ಈ ಬಾರಿ ಲಾಕ್ಡೌನ್ ವಿಭಿನ್ನವಾಗಿದ್ದು, ನ್ಯಾಯಬೆಲೆ ಅಂಗಡಿಗೆ ಅಕ್ಕಿ ನೀಡಲು ಸೂಚನೆ ಇದೆ. ವ್ಯಾಪಾರ ಮಾಡಲು, ತರಕಾರಿ, ಹಾಲಿಗೆ ಅವಕಾಶ ನೀಡಲಾಗಿದೆ. ಈ ನಡುವೆ ಸಿಎಂ ಅವರು ಬಡವರ ಹಾಗೂ ಕೂಲಿ ಕಾರ್ಮಿಕರ ಕುರಿತು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದ್ದಾರೆ" ಎಂದು ಹೇಳಿದ್ದಾರೆ.
ಲಸಿಕೆ ಇಲ್ಲ ಎಂದರೆ ಸಾಯಬೇಕಾ ಎಂದ ಸದಾನಂದ ಗೌಡ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಒಂದೊಂದು ಬಾರಿ ಉದ್ವೇಗಕ್ಕೊಳಕ್ಕಾಗುವುದು ಸಹಜ. ಸಿಎಂ ಆಗಿದ್ದವರು ಈ ರೀತಿ ಮಾತನಾಡುವುದಿಲ್ಲ. ಅವರು ಮಾತನಾಡಿರುವ ಬಗ್ಗೆ ನಾನು ಕ್ಷಮೆ ಕೇಳುತ್ತೇನೆ" ಎಂದಿದ್ದಾರೆ.