ಭೋಪಾಲ್ , ಮೇ.14 (DaijiworldNews/HR): ಕೊರೊನಾ ರೋಗಿಯ ಮೇಲೆ ಪುರುಷ ನರ್ಸ್ ಒಬ್ಬ ಅತ್ಯಾಚಾರ ಮಾಡಿದ್ದು, ಅತ್ಯಾಚಾರಕ್ಕೆ ಒಳಗಾದ 43 ವರ್ಷದ ಮಹಿಳೆಯು ಸಾವನ್ನಪ್ಪಿರುವ ಘಟನೆ ಭೋಪಾಲ್ನ ಬಿ.ಎಂ.ಹೆಚ್.ಆರ್.ಸಿ ಆಸ್ಪತ್ರೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಾಂಧರ್ಭಿಕ ಚಿತ್ರ
ಏಪ್ರಿಲ್ 6 ರಂದು ಈ ಘಟನೆಯು ನಡೆದಿದ್ದರೂ ಆಸ್ಪತ್ರೆ ಆಡಳಿತ ಮಂಡಳಿ ಮತ್ತು ಪೊಲೀಸರು ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.
ಒಂದು ತಿಂಗಳು ಕಳೆದ ನಂತರ ಸಾಮಾಜಿಕ ಕಾರ್ಯಕರ್ತರು ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆಸಿದಾಗ ಪ್ರಕರಣವು ಬೆಳಕಿಗೆ ಬಂದಿದೆ.
ಈ ಬಗ್ಗೆ ನಿಶತ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು 40 ವರ್ಷದ ಸಂತೋಷ್ ಅಹಿರ್ವಾರ್ ಎಂದು ಗುರುತಿಸಲಾಗಿದೆ.
ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತ ಆರೋಪಿಯು ಈ ಹಿಂದೆ 24 ವರ್ಷದ ಸ್ಟಾಫ್ ನರ್ಸ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ಅಲ್ಲದೆ ಕೆಲಸದ ವೇಳೆಯಲ್ಲಿಯೇ ಮದ್ಯಪಾನ ಮಾಡಿದ್ದಕ್ಕಾಗಿ ಅಮಾನತು ಆಗಿದ್ದನು ಎಂದು ವರದಿಯಾಗಿದೆ.