ನವದೆಹಲಿ, ಮೇ.14 (DaijiworldNews/HR): ಭಾರತದಲ್ಲಿ ಕಳೆದ ಒಂದು ತಿಂಗಳಿಂದ ಆತಂಕ ಹೆಚ್ಚಿಸಿರುವ ಕೊರೊನಾದ ಎರಡನೇ ಅಲೆಯು, ದೆಹಲಿಯಲ್ಲಿ ನಿಯಂತ್ರಣಕ್ಕೆ ಬರುತ್ತಿದ್ದು, ಗುರುವಾರ ಕೊರೊನಾ ಸೋಂಕು ದೃಢಪಟ್ಟವರ ಪ್ರಮಾಣದಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡುಬಂದಿದೆ ಎನ್ನಲಾಗಿದೆ.
ಸಾಂಧರ್ಭಿಕ ಚಿತ್ರ
4ನೇ ವಾರ ಲಾಕ್ಡೌನ್ ಮುಂದುವರಿದಿರುವ ಪರಿಣಾಮ ಸೋಂಕಿತರ ಪ್ರಮಾಣ ಇದೇ ಮೊದಲ ಬಾರಿಗೆ ಶೇ 15ಕ್ಕಿಂತ ಕಡಿಮೆ ದಾಖಲಾಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಪರೀಕ್ಷೆಗೆ ಒಳಗಾಗಿರುವ 73,675 ಜನರ ಪೈಕಿ 10,489 (ಶೇ 14.24) ಜನರಲ್ಲಿ ಸೋಂಕು ದೃಢಪಟ್ಟಿದ್ದು, 15,189 ಜನ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 77,717ಕ್ಕೆ ಇಳಿದಿದೆ.
ಇನ್ನುಕಳೆದ 24 ಗಂಟೆಗಳ ಅವಧಿಯಲ್ಲಿ ಕೊರೊನಾದಿಂದ 308 ಜನ ಮೃತಪಟ್ಟಿದ್ದು, ಇದುವರೆಗೆ 20,618 ಜನ ಕೊರೊನಾದಿಂದ ಪ್ರಾಣ ಕಳೆದುಕೊಂಡಂತಾಗಿದೆ.