ನವದೆಹಲಿ, ಮೇ.13 (DaijiworldNews/HR): ಭಾರತಕ್ಕೆ ರಷ್ಯಾದ ಸ್ಪುಟ್ನಿಕ್ ಲಸಿಕೆ ತಲುಪಿದ್ದು ಮುಂದಿನ ವಾರದಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದ್ದು, ಇನ್ನಷ್ಟು ಲಸಿಕೆಗಳು ರಷ್ಯಾದಿಂದ ಆಗಮಿಸಲಿದೆ.
ಸಾಂಧರ್ಭಿಕ ಚಿತ್ರ
ಭಾರತದಲ್ಲಿ ಜುಲೈನಿಂದ ಸ್ಪುಟ್ನಿಕ್ ವಿ ಲಸಿಕೆ ತಯಾರಾಗಲಿದ್ದು, ರಷ್ಯಾದ ಲಸಿಕೆಯ 15.6 ಕೋಟಿ ಡೋಸ್ಗಳನ್ನು ಉತ್ಪಾದಿಸಲು ಭಾರತ ಎದುರು ನೋಡುತ್ತಿದೆ ಎನ್ನಲಾಗಿದೆ.
ಇನ್ನು ಮುಂಬರುವ ಐದು ತಿಂಗಳಲ್ಲಿ ನಾವು ಸ್ಪುಟ್ನಿಕ್ ವಿಯ 2 ಬಿಲಿಯನ್ ಡೋಸ್ ಅನ್ನು ಹೊಂದಲಿದ್ದು, ಇದನ್ನು ಭಾರತ ತಯಾರಿಸಲಿದೆ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ ಪಾಲ್ ತಿಳಿಸಿದ್ದಾರೆ.