ಉನ್ನಾವೊ, ಮೇ.13 (DaijiworldNews/HR): ಜಿಲ್ಲಾಡಳಿತದ ದುರ್ವರ್ತನೆ ಹಾಗೂ ಮಾನಸಿಕ ಕಿರುಕುಳ ವಿರೋಧಿಸಿ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿದ್ದ 14 ಮಂದಿ ವೈದ್ಯರು ರಾಜೀನಾಮೆ ಸಲ್ಲಿಸಿದ ಘಟನೆ ಉತ್ತರ ಪ್ರದೇಶದ ಉನ್ನಾವೊದಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಜಿಲ್ಲಾಧಿಕಾರಿ ಮತ್ತು ಮುಖ್ಯ ವೈದ್ಯಕೀಯ ಅಧಿಕಾರಿಗಳೊಂದಿಗೆ ರಾಜೀನಾಮೆಯ ಕುರಿತಂತೆ ನಡೆಯುತ್ತಿರುವ ಮಾತುಕತೆಗೆಗಳು ಕೊನೆಗೊಳ್ಳುವವರೆಗೆ ಕೊರೊನಾ ಸಂಬಂಧಿತ ಕೆಲಸಗಳಿಂದ ದೂರವಿರುವುದಿಲ್ಲ ಎಂದು ಈ ವೈದ್ಯರು ಭರವಸೆ ನೀಡಿದ್ದಾರೆ.
ಇನ್ನು ವೈದ್ಯರು ತಮ್ಮ ರಾಜೀನಾಮೆ ಪತ್ರಗಳ ಪ್ರತಿಗಳನ್ನು ಹೆಚ್ಚುವರಿ ಆರೋಗ್ಯ ಮುಖ್ಯ ಕಾರ್ಯದರ್ಶಿ , ಮಹಾನಿರ್ದೇಶಕರು ಮತ್ತು ಇತರ ಹಿರಿಯ ಅಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ವರದಿಯಾಗಿದೆ.
ಗ್ರಾಮೀಣ ಪ್ರದೇಶಗಳ ಸೀಮಿತ ಸಂಪನ್ಮೂಲಗಳಲ್ಲಿಯೂ ನಾವು ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದು, ನಮಗೆ ಸಹಕಾರ ನೀಡುವ ಬದಲಿಗೆ ಜಿಲ್ಲಾಧಿಕಾರಿ ಮತ್ತು ಮುಖ್ಯ ವೈದ್ಯಕೀಯ ಅಧಿಕಾರಿಗಳು ನಮ್ಮೊಂದಿಗೆ ದುರ್ವರ್ತನೆ ತೋರುತ್ತಿದ್ದಾರೆ" ಎಂದು ಡಾ.ಸಂಜೀವ್ ಎಂಬುವವರು ದೂರಿದ್ದಾರೆ.