ಭೋಪಾಲ್, ಮೇ.13 (DaijiworldNews/HR): ಕೊರೊನಾದಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ತಿಂಗಳಿಗೆ 5 ಸಾವಿರ ರೂ. ಪಿಂಚಣಿ ನೀಡಲಾಗುತ್ತದೆ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಣೆ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ತಿಂಗಳಿಗೆ 5 ಸಾವಿರ ರೂ ಪಿಂಚಣಿ ನೀಡಲಾಗುವುದು, ಅಷ್ಟೆ ಅಲ್ಲದೆ ಅಂತಹ ಮಕ್ಕಳಿಗೆ ಸರ್ಕಾರವೇ ಉಚಿತ ಶಿಕ್ಷಣ ಮತ್ತು ರೇಷನ್ ನೀಡಲಿದೆ" ಎಂದರು.
ಇನ್ನು ಪತಿ ಕೊರೊನಾದಿಂದ ಸಾವನ್ನಪ್ಪಿ ಅವರ ಪತ್ನಿ ವ್ಯವಹಾರ ಮಾಡಲು ಬಯಸಿದ್ದಲ್ಲಿ, ಸರ್ಕಾರದ ಖಾತರಿಯ ಮೇಲೆ ಬಡ್ಡಿ ಇಲ್ಲದೆ ಸಾಲವನ್ನು ಕೂಡ ನೀಡುತ್ತದೆ" ಎಂದಿದ್ದಾರೆ.
ರೆಮ್ಡೆಸಿವಿರ್ ಚುಚ್ಚುಮದ್ದನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಇದೆ ವೇಳೆ ಎಚ್ಚರಿಕೆ ನೀಡಿದ್ದಾರೆ.