ಬೆಂಗಳೂರು,ಮೇ.13 (DaijiworldNews/HR): ದಕ್ಷಿಣ ಕನ್ನಡ ಜಿಲ್ಲೆಯ ಕೊರೊನಾ ರೋಗಿಗಳಿಗೆ ಆಮ್ಲಜನಕ ಪೂರೈಸಲು ಆಮ್ಲಜನಕ ಟ್ಯಾಂಕರ್ಗಳನ್ನು ಖರೀದಿಸಲು ಬೇಕಾಗುವ ಅನುದಾನವನ್ನು ಎಂಡಿಎಫ್ ನಿಧಿ ಬಳಸಲು ಅನುಮೋದನೆ ನೀಡಿದ ಕರ್ನಾಟಕ ಸರ್ಕಾರದ ಗಣಿಗಾರಿಕೆ ಸಚಿವರಾದ ಮುರುಗೇಶ್ ಆರ್ ನಿರಾಣಿಯವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಧನ್ಯವಾದ ಅರ್ಪಿಸಿದ್ದಾರೆ.
ನಳಿನ್ ಕುಮಾರ್ ಕಟೀಲ್ ಅವರು ಮುರುಗೇಶ್ ನಿರಾಣಿಯವರೊಂದಿಗೆ ಮಾತುಕತೆ ನಡೆಸಿ ಜಿಲ್ಲೆಯಲ್ಲಿ ಆಕ್ಸಿಜನ್ ಸಂಗ್ರಹಿಸಲು ಮತ್ತು ಸಾಗಿಸಲು 24 ಮೆಟ್ರಿಕ್ ಟನ್ ಆಕ್ಸಿಜನ್ ಸಂಗ್ರಹ ಸಾಮರ್ಥ್ಯದ ಆಕ್ಸಿಜನ್ ಟ್ಯಾಂಕರ್ ಖರೀದಿ ಮಾಡಲು ಎಂಡಿಎಫ್ ನಿಧಿ ಬಳಸಿಕೊಳ್ಳುವಂತೆ ಮನವಿ ಮಾಡಿದ್ದರು. ಇದಕ್ಕೆ ಸಚಿವ ನಿರಾಣಿ ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಅಗತ್ಯವಿರುವ ಕಡೆ ಆಕ್ಸಿಜನ್ ಟ್ಯಾಂಕರ್ ಖರೀದಿಸಲು ತೀರ್ಮಾನಿಸಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ನಳಿನ್ ಕುಮಾರ್ ಕಟೀಲ್ , "ದಕ್ಷಿಣ ಕನ್ನಡ ಜಿಲ್ಲೆಯ ಕೋವಿಡ್ ರೋಗಿಗಳಿಗೆ ಅತ್ಯಾವಶ್ಯವಿರುವ ಆಮ್ಲಜನಕವನ್ನು ಪೂರೈಸಲು ಆಮ್ಲಜನಕ ಟ್ಯಾಂಕರ್ಗಳನ್ನು ಖರೀದಿಸಲು ಬೇಕಾಗುವ ಅನುದಾನವನ್ನು ಸಂಕಷ್ಟದ ಸಮಯದಲ್ಲಿ ಎಂಡಿಎಫ್ ನಿಧಿ ಬಳಸಲು ಅನುಮೋದನೆ ನೀಡಿರುವ ಕರ್ನಾಟಕ ಸರ್ಕಾರದ ಗಣಿಗಾರಿಕೆ ಸಚಿವರಾದ ಶ್ರೀ ಮುರುಗೇಶ್ ಆರ್ ನಿರಾಣಿಯವರಿಗೆ ಧನ್ಯವಾದಗಳು" ಎಂದು ತಿಳಿಸಿದ್ದಾರೆ.