ನವದೆಹಲಿ, ಮೇ 13 (DaijiworldNews/MB) : ಎರಡು ಡೋಸ್ ಕೋವಿಶೀಲ್ಡ್ ಲಸಿಕೆಗಳ ನಡುವಿನ ಅಂತರವನ್ನು 12-16 ವಾರಗಳಿಗೆ ಹೆಚ್ಚಿಸಲು ತಜ್ಞರ ಸಮಿತಿಯಾದ ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡವು (ಎನ್ಟಿಎಜಿಐ) ಗುರುವಾರ ಶಿಫಾರಸು ಮಾಡಿದೆ ಎಂದು ವರದಿಯಾಗಿದೆ.
ಇನ್ನು ಹಾಗೆಯೇ ಗರ್ಭಿಣಿ ಮಹಿಳೆಯರಿಗೆ ಯಾವುದೇ ಕೊರೊನಾ ಲಸಿಕೆ ತೆಗೆದುಕೊಳ್ಳುವ ಆಯ್ಕೆಯನ್ನು ನೀಡಬಹುದು. ಹೆರಿಗೆಯ ನಂತರ ಯಾವುದೇ ಸಮಯದಲ್ಲಿ ಹಾಲುಣಿಸುವ ಮಹಿಳೆಯರಿಗೆ ಲಸಿಕೆ ನೀಡಬಹುದು ಎಂದು ಸಮಿತಿ ಸೂಚಿಸಿದೆ.
ಇನ್ನು ಕೊರೊನಾ ದೃಢಪಟ್ಟಿರುವವರು ಕೊರೊನಾದಿಂದ ಗುಣಮುಖರಾದ ಆರು ತಿಂಗಳ ನಂತರ ಲಸಿಕೆ ಪಡೆಯಬೇಕು ಎಂದು ಕೂಡಾ ಸಮಿತಿಯು ಹೇಳಿದೆ.
ಪ್ರಸ್ತುತ ಕೋವಿಶೀಲ್ಡ್ ಎರಡು ಡೋಸ್ಗಳ ನಡುವೆ ನಾಲ್ಕರಿಂದ ಎಂಟು ವಾರಗಳ ಅಂತರವಿದೆ. ಇನ್ನು ಕೋವಾಕ್ಸಿನ್ನ ಡೋಸೇಜ್ ನಡುವಿನ ಅಂತರದಲ್ಲಿ ಯಾವುದೇ ಬದಲಾವಣೆಯನ್ನು ಸಮಿತಿಯು ಸೂಚಿಸಿಲ್ಲ.