ಕೋಲ್ಕತ, ಮೇ.13 (DaijiworldNews/HR): ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದ್ದ ಬಿಜೆಪಿ ಸಂಸದರಿಬ್ಬರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಂಗಾಳದಲ್ಲಿ ಬಿಜೆಪಿ ಬಲ 77 ರಿಂದ 75ಕ್ಕೆ ಕುಸಿದಿದೆ.
ಬಿಜೆಪಿ ಹೈಕಮಾಂಡ್ ಆದೇಶದ ಮೇರೆಗೆ ನಿಶಿತ್ ಪ್ರಾಮಾಣಿಕ್ ಮತ್ತು ಜಗನ್ನಾಥ್ ಸರ್ಕಾರ್ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ತೃಣಮೂಲ ಕಾಂಗ್ರೆಸ್ ಬಿಜೆಪಿಯನ್ನು ಗೇಲಿ ಮಾಡಿದ್ದು, ಲೋಕಸಭೆಯಲ್ಲಿ ಸೇಫ್ ಆಗಿರಲು ಬಿಜೆಪಿ ಈ ಆಟವಾಡುತ್ತಿದ್ದು, . ಅಲ್ಲದೆ ಪಶ್ಚಿಮ ಬಂಗಾಳದ ಎಲ್ಲಾ ಬಿಜೆಪಿ ಶಾಸಕರಿಗೆ ಸೆಕ್ಯುರಿಟಿ ನೀಡುವ ಮೂಲಕ ಬಿಜೆಪಿ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ" ಎಂದು ಆರೋಪಿಸಿದೆ.
ಇನ್ನು ಬಂಗಾಳ ಚುನಾವಣೆಯಲ್ಲಿ ಸ್ಪರ್ಧಿಸಿದ ಐವರು ಸಂಸದರಲ್ಲಿ ನಿಶಿತ್ ಪ್ರಾಮಾಣಿಕ್ ಮತ್ತು ಜಗನ್ನಾಥ್ ವಿಜಯಶಾಲಿ ಆಗಿದ್ದರು, ಆದರೆ ಕೇವಲ 77 ಸ್ಥಾನಗಳು ಬಂದಿದ್ದರಿಂದ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ, ಹೀಗಾಗಿ ನಿಶಿತ್ ಮತ್ತು ಜಗನ್ನಾಥ್ ಸಂಸತ್ತಿಗೆ ಹೆಚ್ಚು ಉಪಯುಕ್ತ ಎಂದು ಹೇಳಿ ಬಿಜೆಪಿ ಹೈಕಮಾಂಡ್ ರಾಜೀನಾಮೆ ಕೊಡಿಸಿದೆ ಎನ್ನಲಾಗಿದೆ.