ಬೆಂಗಳೂರು, ಮೇ 12 (DaijiworldNews/SM): ಮೇ 1ರಿಂದ ದೇಶದೆಲ್ಲೆಡೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಆದರೆ, ಇದಾದ ಕೇವಲ 12 ದಿನಗಳಲ್ಲೇ ತಾತ್ಕಾಲಿಕವಾಗಿ ರಾಜ್ಯದಲ್ಲಿ ನಿಲ್ಲಿಸಲಾಗಿದೆ.
ರಾಜ್ಯದಲ್ಲಿ ಲಸಿಕೆ ಲಭ್ಯತೆಯ ಕೊರತೆ ತೀವ್ರವಾಗಿದ್ದು, ಈ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರಕ್ಕೆ ಬಂದಿದೆ. ಮುಂದಿನ ಆದೇಶದ ತನಕ 18 ವರ್ಷದಿಂದ 45 ವರ್ಷ ವರೆಗಿನವರಿಗೆ ಲಸಿಕೆ ವಿತರಣೆ ಇಲ್ಲ. ಸದ್ಯ ೪೫ ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್ ಲಸಿಕೆ ವಿತರಣೆಗೆ ಮೊದಲ ಆದ್ಯತೆ ನೀಡಲಾಗುತ್ತದೆ.
2ನೇ ಡೋಸ್ ಪೂರೈಕೆಯಾದ ಬಳಿಕವಷ್ಟೇ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣೆಯ ದಿನಾಂಕವನ್ನು ಘೋಷಿಸಲಾಗುವುದೆಂದು ಸರಕಾರ ಹೇಳಿದೆ. ಇದರಿಂದಾಗಿ ಯುವಜನತೆಗೆ ಲಸಿಕೆ ಪೂರೈಕೆಗೆ ವ್ಯತ್ಯಯ ಉಂಟಾಗಿದೆ.