ಬೆಂಗಳೂರು, ಮೇ.12 (DaijiworldNews/PY): ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ, ಜುಲೈ 7 ಹಾಗೂ 8ರಂದು ನಿಗದಿಯಾಗಿದ್ದ 2021ನೇ ಸಾಲಿನ ಸಿಇಟಿ ಪರೀಕ್ಷೆಯನ್ನು ಆಗಸ್ಟ್ 28 ಹಾಗೂ 29ಕ್ಕೆ ಮುಂದೂಡಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬುಧವಾರ ಮಾಹಿತಿ ನೀಡಿದ್ದು, "ಜುಲೈ 7 ಹಾಗೂ 8ರಂದು ನಿಗದಿಯಾಗಿದ್ದ 2021ನೇ ಸಾಲಿನ ಪ್ರವೇಶ ಪರೀಕ್ಷೆಯನ್ನು ಹಾಗೂ ಜುಲೈ 9ರಂದು ನಡೆಯಬೇಕಿದ್ದ ಕನ್ನಡ ಭಾಷಾ ಪರೀಕ್ಷೆಯನ್ನು ಮುಂದೂಡಲಾಗಿದೆ" ಎಂದು ತಿಳಿಸಿದೆ.
"ಆಗಸ್ಟ್ 28 ಹಾಗೂ ಆಗಸ್ಟ್ 29ರಂದು ಸಿಇಟಿಯನ್ನು ಹಾಗೂ ಆಗಸ್ಟ್ 30ರಂದುಕನ್ನಡ ಭಾಷಾ ಪರೀಕ್ಷೆಯನ್ನು ನಡೆಲಾಗುವುದು. ಸದ್ಯದಲ್ಲಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗುವುದು" ಎಂದು ಹೇಳಿದೆ.