ಅಗರ್ತಲ, ಮೇ.12 (DaijiworldNews/PY): ತ್ರಿಪುರಾದ ಅಂಬಸ್ಸದಲ್ಲಿ ಕೊರೊನಾ ಕೇರ್ ಕೇಂದ್ರದಿಂದ ಕನಿಷ್ಠ 25 ಮಂದಿ ಸೋಂಕಿತರು ಪರಾರಿಯಾದ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
"ಅಂಬಸ್ಸದ ಪಂಚಾಯತ್ ರಾಜ್ ತರಬೇತಿ ಸಂಸ್ಥೆಯ ಕಟ್ಟಡದಲ್ಲಿನ ಕೊರೊನಾ ಕೇರ್ ಕೇಂದ್ರದಿಂದ ಸೋಮವಾರ ರಾತ್ರಿ ಸೋಂಕಿತರು ಪರಾರಿಯಾಗಿದ್ದಾರೆ. ಇವರು ಇತರೆ ರಾಜ್ಯಗಳಿಂದ ಬಂದಿರುವ ವಲಸೆ ಕಾರ್ಮಿಕರು. ಪರಾರಿಯಾದ ಸೋಂಕಿತರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ. ರೈಲು ನಿಲ್ದಾಣದಿಂದ ಏಳು ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ" ಎಂದು ಅಂಬಸ್ಸ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಹಿಮಾದ್ರಿ ಸರ್ಕಾರ್ ಹೇಳಿದ್ದಾರೆ.
"ಸೋಂಕಿತರು ಪರರಿಯಾಗಿರುವ ಕುರಿತು ಎಲ್ಲಾ ಪೊಲೀಸ್ ಠಾಣೆಗಳಿಗೆ ಹಾಗೂ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದ್ದು, ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ" ಎಂದಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, "18 ಮಂದಿ ಸೋಂಕಿತರು ಇತರೆ ರಾಜ್ಯಗಳಿಗೆ ಹೋಗಿರುವ ಸಾಧ್ಯತೆ ಇದೆ" ಎಂದು ಪೊಲೀಸರು ಹೇಳಿದ್ದಾರೆ.
ಅಗರ್ತಲದಿಂದ ಎಪ್ರಿಲ್ 22ರಂದು 30 ಮಂದಿ ಸೋಂಕಿತರು ಪರಾರಿಯಾಗಿದ್ದರು.