ಬೆಂಗಳೂರು, ಮೇ.12 (DaijiworldNews/PY): "ಎರಡನೇ ಡೋಸ್ ಪಡೆಯುತ್ತಿರುವವರಿಗೆ ಲಸಿಕೆ ಕೊರತೆ ಉಂಟಾಗಿಲ್ಲ. ಮೊದಲ ಡೋಸ್ ಪಡೆಯುತ್ತಿರುವವರಿಗೆ ಮಾತ್ರವೇ ಸಮಸ್ಯೆಯಾಗುತ್ತಿದೆ" ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರ"ಸ್ತುತ ದಿನಕ್ಕೆ 2.5 ಲಕ್ಷ ಡೋಸ್ಗಳಲ್ಲಿ ಒದಗಿಸಲಾಗುತ್ತಿದೆ. ಈ ಹಿನ್ನೆಲೆ ಎಲ್ಲಿಯೂ ಸಮಸ್ಯೆಯಾಗಿಲ್ಲ. ಲಸಿಕಾ ಕೇಂದ್ರಕ್ಕೆ ಒಂದೇ ದಿನ ಏಕಾಏಕಿ ಅಧಿಕ ಮಂದಿ ನುಗ್ಗಬಾರದು. ಇದಕ್ಕೂ ಮುನ್ನ ಮೊದಲು ಬಂದವರಿಗೆ ಲಸಿಕೆ ನೀಡಲಾಗುತ್ತಿತ್ತು. ಇನ್ನುಮುಂದೆ 45 ವರ್ಷ ಮೇಲ್ಪಟ್ಟರೂ ಕೂಡಾ ಆನ್ಲೈನ್ ಮೂಲಕ ನೋಂದಣಿ ಮಾಡಿಸಿಕೊಳ್ಳಬೇಕು" ಎಂದು ಹೇಳಿದ್ದಾರೆ.
ಆಕ್ಸಿಜನ್ ಸಮಸ್ಯೆ ಎದುರಿಸುತ್ತಿರುವ ಕೊರೊನಾ ಸೋಂಕಿತರಿಗೆ ಮನೆ ಬಾಗಿಲಿಗೆ ಓಲಾ ಕ್ಯಾಬ್ಗಳ ಮುಖೇಮ ಆಕ್ಸಿಜನ್ ಕಾನ್ಸಟ್ರೇಟರ್ಗಳನ್ನು ಒದಗಿಸುವ ಕಾರ್ಯಕ್ರಮಕ್ಕೆ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಬುಧವಾರ ಚಾಲನೆ ನೀಡಿದರು.
ಈ ವ್ಯವಸ್ಥೆ ಪ್ರಥಮ ಬಾರಿ ಬೆಂಗಳೂರಿನಲ್ಲಿ ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಈ ವ್ಯವಸ್ಥೆ ವಿಸ್ತರಣೆಯಾಗಲಿದೆ. ಈ ಕಾರ್ಯದಲ್ಲಿ ಗಿವ್ ಇಂಡಿಯಾ ಹಾಗೂ ಓಲಾ ಕ್ಯಾಬ್ ಕಂಪೆನಿಗಳು ಸರ್ಕಾರದೊಂದಿಗೆ ಕೈಜೋಡಿಸಿವೆ.