ಚಿತ್ರದುರ್ಗ, ಮೇ 12 (DaijiworldNews/MS): ರಾಜ್ಯದಲ್ಲಿ ಕೊರೊನಾ ಸಾಂಕ್ರಮಿಕ ರೋಗ ತನ್ನ ರುದ್ರ ನರ್ತನ ಮುಂದುವರಿಸಿದ್ದು ಇದೀಗ ಖಾಸಗಿ ಟಿವಿ ವಾಹಿನಿಯೊಂದರ ಕ್ಯಾಮರಾಮ್ಯಾನ್ ಅವರನ್ನೂ ಬಲಿ ಪಡೆದಿದೆ.
ಮೃತರನ್ನು ಬಸವರಾಜ್ ಕೋಟಿ ಎಂದು ಗುರುತಿಸಲಾಗಿದೆ. ಪಬ್ಲಿಕ್ ಟಿವಿ ಚಾನೆಲ್ನ ಕ್ಯಾಮರಾಮ್ಯಾನ್ ಆಗಿದ್ದ ಇವರು ಚಿತ್ರದುರ್ಗ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು. ಮೂಲತಃ ಧಾರವಾಡ ಮೂಲದ ಬಸವರಾಜ್ ಕೋಟಿ ಇವರಿಗೆ 10 ದಿನಗಳ ಹಿಂದೆ ಕರೊನಾ ಸೋಂಕು ತಗುಲಿತ್ತು. ಅಂದಿನಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾಸ್ಪತ್ರೆಯಲ್ಲಿ ಇಂದು(ಬುಧವಾರ) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಮೃತರು ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ.