ನವದೆಹಲಿ, ಮೇ 12 (DaijiworldNews/MS): ಎಐಐಎಂ ಅಧ್ಯಕ್ಷ, ಲೋಕಸಭಾ ಸದಸ್ಯ ಅಸದುದ್ದೀನ್ ಒವೈಸಿ, ಕೋವಿಡ್ -19 ನಿರ್ವಹಣೆಯ ಕೇಂದ್ರವನ್ನು ಗುರಿಯಾಗಿಸಿಕೊಂಡು ವಾಗ್ದಳಿ ನಡೆಸಿದ್ದು, " ವಿಶ್ವದಲ್ಲಿ ಅತ್ಯಂತ ಕೆಟ್ಟ ಲಸಿಕೆ ನೀತಿಗೆ ಯಾವುದಾದರೂ ಪ್ರಶಸ್ತಿ ದೊರಕುವುದಾದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ನೀಡಬೇಕು ವ್ಯಂಗ್ಯವಾಡಿದ್ದಾರೆ".
ಕೋವಿಡ್ -19 ರ ಎರಡನೇ ತರಂಗದ ಬಗ್ಗೆ ನಮ್ಮ ದೇಶದ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದರೂ ಅದು ನಿದ್ದೆ ಮಾಡಿದ್ದ ನರೇಂದ್ರ ಮೋದಿ ಸರ್ಕಾರ ಆವರ ಎಚ್ಚರಿಕೆಯನ್ನು ಮೂಲೆಗುಂಪು ಮಾಡಿದ್ದರು ಎಂದು ಆರೋಪಿಸಿದ್ದಾರೆ.
ವ್ಯಾಕ್ಸಿನೇಷನ್ ನೀತಿಯು ನಮ್ಮ ಸಂವಿಧಾನದ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನರ ಜೀವನ ಹಕ್ಕನ್ನು ಉಲ್ಲಂಘಿಸುತ್ತಿದೆ. ಕೇಂದ್ರವೂ ವ್ಯಾಕ್ಸಿನೇಷನ್ ನೀತಿಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಓವೈಸಿ ಕಿಡಿಕಾರಿದ್ದಾರೆ.
ಕೊವೀಡ್ ಲಸಿಕೆಗಳನ್ನು ವಿದೇಶಗಳಿಗೆ ರಫ್ತು ಮಾಡುವುದು ಮತ್ತು ಕೇವಲ ಎರಡು ಕಂಪನಿಗಳಲ್ಲಿ ಮಾತ್ರ ಲಸಿಕೆಗಳ ತಯಾರಿಕೆಗೆ ಅನುಮತಿ ನೀಡಿರುವುದನ್ನು ಅವರು ಪ್ರಶ್ನಿಸಿದ್ದು" ಸುಮಾರು 6 ಕೋಟಿ ಡೋಸ್ ಕೊವೀಡ್ ಲಸಿಕೆಗಳನ್ನು ಕೇಂದ್ರವೂ ವಿದೇಶಗಳಿಗೆ ರಫ್ತು ಮಾಡಿದೆ. ಐಸಿಎಂಆರ್ ಕೋವಾಕ್ಸಿನ್ ಪರವಾನಗಿಯನ್ನು ಭಾರತ್ ಬಯೋಟೆಕ್ ಗೆ ನೀಡಿದೆ. ನಾವು ವಿಶ್ವದ ಫಾರ್ಮಸಿಯ ರಾಜಧಾನಿಯಾಗಿ ಹೊರಹೊಮ್ಮಿದ್ದರೂ ಕೇವಲ ಎರಡು ಕಂಪನಿಗಳು ಮಾತ್ರ ಲಸಿಕೆಗಳನ್ನು ಏಕೆ ತಯಾರಿಸುತ್ತವೆ?" ಎಂದಿದ್ದಾರೆ.
ಕಳೆದ ಮೂರು ವಾರಗಳಿಂದ ಸಾಂಕ್ರಮಿಕ ರೋಗದ ಕಾರಣ ಭಾರತದಲ್ಲಿ ಪ್ರತಿದಿನ 4,000 ಕ್ಕೂ ಹೆಚ್ಚು ಜನರು ಸಾಯುತ್ತಿದ್ದಾರೆ. ಸ್ಮಶಾನಗಳು ಮೃತ ದೇಹಗಳಿಂದ ತುಂಬಿವೆ. ಎರಡನೇ ತರಂಗವನ್ನು ತಡೆಯುವಷ್ಟು ಸಾಮರ್ಥ್ಯವನ್ನು ಹೊಂದಿರದ ಕಾರಣ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತನ್ನ ತಪ್ಪನ್ನು ಒಪ್ಪಿಕೊಂಡುಭಾರತೀಯರ ಮುಂದೆ ಕ್ಷಮೆಯಾಚಿಸಬೇಕು " ಎಂದು ಹೇಳಿದ್ದಾರೆ.