ನವದೆಹಲಿ, ಮೇ.11 (DaijiworldNews/PY): "ಕೊರೊನಾ ಲಸಿಕೆ ನೀಡಿಕೆಯಲ್ಲಿ ಎರಡನೇ ಡೋಸ್ ಬಾಕಿ ಇರುವವರಿಗೆ ಆದ್ಯತೆ ನೀಡಬೇಕು" ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ.
"ಕೇಂದ್ರದಿಂದ ಸರಬರಾಜು ಮಾಡಲಾದ ಡೋಸ್ಗಳ ಪೈಕಿ ಕನಿಷ್ಠ ಶೇ.70ರಷ್ಟು ಡೋಸ್ಗಳನ್ನು ಕಾಯ್ದಿರಿಸುವಂತೆ ಮಂಗಳವಾರ ಕೇಂದ್ರ ರಾಜ್ಯಗಳಿಗೆ ಮನವಿ ಮಾಡಿದ್ದು, ಲಸಿಕೆ ವ್ಯರ್ಥವನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದೆ" ಎಂದು ಆರೋಗ್ಯ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹಾಗೂ ಡಾ.ಆರ್.ಎಸ್. ಶರ್ಮಾ ಅವರು ಮಂಗಳವಾರ ಕೊರೊನಾ ಲಸಿಕೆಯ ಸ್ಥಿತಿಯನ್ನು ಪರಿಶೀಲಿಸಲು ರಾಜ್ಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಮೊದಲ ಡೋಸ್ ತೆಗೆದುಕೊಂಡ ಎಲ್ಲಾ ಫಲಾನುಭವಿಗಳಿಗೆ ಎರಡನೇ ಡೋಸ್ ಆದ್ಯತೆ ನೀಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ರಾಜ್ಯಗಳಿಗೆ ಒತ್ತಾಯಿಸಿದ್ದಾರೆ.
"ರಾಜ್ಯಗಳಿಗೆ ಸರಬರಾಜು ಮಾಡಲಾದ ಲಸಿಕೆಗಳ ಪೈಕಿ ಶೇ.70ರಷ್ಟನ್ನು ಎರಡನೇ ಡೋಸ್ ಲಸಿಕೆಗಾಗಿ ಹಾಗೂ ಉಳಿದ ಶೇ.30ರಷ್ಟನ್ನು ಮೊದಲ ಡೋಸ್ಗಾಗಿ ಭಾರತ ಸರ್ಕಾರದ ಚಾನೆಲ್ನಿಂದ ಕಾಯ್ದಿರಿಸಬಹುದು" ಎಂದು ತಿಳಿಸಲಾಗಿದೆ.
"ಲಸಿಕೆಯನ್ನು ಶೇ.100ಕ್ಕೆ ಹೆಚ್ಚಿಸುವ ಸ್ವಾತಂತ್ರ್ಯ ರಾಜ್ಯಗಳಿಗೆ ಇದೆ. ಕೋವಿನ್ನಲ್ಲಿ ರಾಜ್ಯವರು ಸಂಖ್ಯೆಗಳನ್ನು ಅವುಗಳ ಯೋಜನಾ ಉದ್ದೇಶಗಳಿಗಾಗಿ ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗಿದೆ" ಎಂದು ಹೇಳಲಾಗಿದೆ.